[ad_1]
ಬೆಂಗಳೂರು: ಸಾವಣ್ಣ ಪ್ರಕಾಶನದಿಂದ ʼದಿನಕ್ಕೊಂದು ಕಿವಿಮಾತುʼ ಸರಣಿಯ 1000 ಕಂತಿನ ಸಂಭ್ರಮಾಚರಣೆಯೊಂದಿಗೆ ʼಲಕ್ಷಾಧಿಪತಿಯ ಗುಣಲಕ್ಷಣಗಳುʼ ಮತ್ತು ʼಸಿರಿವಂತಿಕೆಗೆ ಸರಳ ಸೂತ್ರಗಳುʼ ಕೃತಿಯ ಹಿಂದಿ ಹಾಗೂ ತಮಿಳು ಭಾಷೆಯ ಅನುವಾದ ಪುಸ್ತಕಗಳ ಅನಾವರಣ ಕಾರ್ಯಕ್ರಮವನ್ನು (Book Release) ಏ.27ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಆರ್ಥೋಪೆಡಿಕ್ ಸರ್ಜನ್ ಡಾ. ಕಿರಣ್ ಸೂರ್ಯ ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಲೇಖಕ ರಂಗಸ್ವಾಮಿ ಮೂಕನಹಳ್ಳಿ, ಲೇಖಕ ಮತ್ತು ಅನುವಾದಕ ಕೆ. ನಲ್ಲತಂಬಿ, ಲೇಖಕ ಮತ್ತು ಅನುವಾದಕ ಚಂದ್ರಶೇಖರ್ ಮದಭಾವಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ
[ad_2]
Source link