[ad_1]
ಸಿಂಗಾಪುರ: ಕೆಲವು ಕಂಪೆನಿಗಳು ತನ್ನ ಉದ್ಯೋಗಿಗಳ ಜತೆ ಕೆಟ್ಟ ರೀತಿಯಲ್ಲಿ ವರ್ತಿಸುತ್ತವೆ. ಉದ್ಯೋಗಿಗಳಿಗೆ ಅವಮಾನ ಮಾಡುವುದು, ನಿಂದಿಸುವುದು ಮಾಡುತ್ತವೆ. ಆದರೆ ಉದ್ಯೋಗಿಗಳು ಅದನ್ನು ಸಹಿಸಿಕೊಂಡು ತಮ್ಮ ಪಾಡಿಗೆ ತಾವು ಕೆಲಸವನ್ನು ಮಾಡಿಕೊಂಡು ಹೋಗುತ್ತಿರುತ್ತಾರೆ. ಆದರೆ ಸಿಂಗಾಪುರ ಕಂಪನಿಯ ಉದ್ಯೋಗಿಯೊಬ್ಬಳು ಮಾತ್ರ ಮೇಲಾಧಿಕಾರಿಗಳ ವರ್ತನೆಯಿಂದ ನಿರಾಶೆಗೊಂಡು ಟಾಯ್ಲೆಟ್ ಪೇಪರ್ನಲ್ಲಿ ರಾಜೀನಾಮೆ ನೀಡಿದ್ದಾಳೆ. ಅವಳು ಈ ರಾಜೀನಾಮೆ ಪತ್ರವನ್ನು ತನ್ನ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಹಂಚಿಕೊಂಡಿದ್ದಾಳೆ. ಇದು ಈಗ ವೈರಲ್ (Viral News) ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ರಾಜೀನಾಮೆ ಪತ್ರದ ಫೋಟೋವನ್ನು ಪೋಸ್ಟ್ ಮಾಡಿದ ಸಿಂಗಾಪುರ ಕಂಪನಿಯ ನಿರ್ದೇಶಕಿ ಏಂಜೆಲಾ ಯೋಹ್ ಎಂಬಾಕೆ, ತಾನು ರಾಜೀನಾಮೆ ನೀಡಲು ಈ ರೀತಿಯ ಕಾಗದವನ್ನು ಬಳಸಿದ್ದೇನೆ. ಏಕೆಂದರೆ ಈ ಕಂಪನಿಯು ತನ್ನನ್ನು ಅದೇ ರೀತಿಯಲ್ಲಿ ಪರಿಗಣಿಸಿದೆ. ಹಾಗಾಗಿ ತಾನು ಕೆಲಸವನ್ನು ಬಿಡುತ್ತಿದ್ದೇನೆ ಎಂದು ಬರೆದಿದ್ದಾಳೆ. ಬಳಸಿ ಬಿಸಾಡಬಹುದಾದ ಟಾಯ್ಲೆಟ್ ಪೇಪರ್ನಂತೆ ಕಂಪನಿಯಲ್ಲಿ ಉದ್ಯೋಗಿಯನ್ನು ಕಡೆಗಣಿಸಲಾಗಿದೆ ಮತ್ತು ಬಳಸಿಕೊಳ್ಳಲಾಗಿದೆ ಎಂದು ಯೋಹ್ ವಿವರಿಸಿದ್ದಾಳೆ.
ಆಕೆ ತನ್ನ ಪೋಸ್ಟ್ನಲ್ಲಿ, ಯಾವುದೇ ಕಂಪನಿಯಾಗಿರಲಿ ಉದ್ಯೋಗಿಗಳನ್ನು ಗೌರವದಿಂದ ಕಾಣುವ ಮಹತ್ವವನ್ನು ಒತ್ತಿ ಹೇಳಿದ್ದಾಳೆ. ಉದ್ಯೋಗಿಗಳನ್ನು ಕೀಳಾಗಿ ಕಾಣುವ ಮತ್ತು ಕೋಪದಿಂದ ಉದ್ಯೋಗಿಗಳನ್ನು ಹೊರಹಾಕುವ ಕಂಪನಿಗಳಲ್ಲಿ ಕೆಲಸಕ್ಕೆ ಸೇರುವ ಮುನ್ನ ಪರಿಶೀಲನೆ ಮಾಡಿ ಎಂದು ಆಕೆ ಸಲಹೆ ನೀಡಿದ್ದಾಳೆ. ಆಕೆ ಬಹಳ ಬೇಸರದಿಂದ ಈ ಪೋಸ್ಟ್ ಮಾಡಿದ ಕಾರಣ ಇದು ಅನೇಕರ ಗಮನ ಸೆಳೆದಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ಗಳ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ರಾಜೀನಾಮೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಕಂಪನಿ ಹೇಗೆ ನಡೆಸಿಕೊಂಡಿದೆಯೋ, ಅದೇ ರೀತಿ ರಾಜೀನಾಮೆ ನೀಡಲಾಗಿದೆ. ಇದರಲ್ಲಿ ತಪ್ಪಿಲ್ಲ. ಯಾವ ಒಬ್ಬ ಉದ್ಯೋಗಿ ಈ ರೀತಿ ಕೆಲಸಕ್ಕೆ ರಾಜೀನಾಮೆ ನೀಡಲು ಬಯಸುವುದಿಲ್ಲ. ಆದರೆ ಕಂಪನಿ ಈ ರೀತಿ ಬಯಸಿದರೆ ಉದ್ಯೋಗಿಯ ತಪ್ಪಲ್ಲ ಎಂದಿದ್ದಾರೆ. ನೆಟ್ಟಿಗರೊಬ್ಬರು, ಇತ್ತೀಚೆಗೆ ಬಹುತೇಕ ಕಂಪನಿಗಳು ಉದ್ಯೋಗಿಗಳನ್ನು ಈ ರೀತಿ ನಡೆಸಿಕೊಳ್ಳುತ್ತವೆ. ಈ ಸ್ಥಳದಲ್ಲಿ ಉದ್ಯೋಗ ಮಾಡುವುದಕ್ಕಿಂತ ಕೆಲಸ ಬಿಡುವುದೇ ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ಈ ಮಹಿಳೆಯೂ ಮಾನಸಿಕವಾಗಿ ಎಷ್ಟು ನೊಂದಿರಬೇಕು ಎಂಬುದನ್ನು ಇದು ಹೇಳುತ್ತದೆ ಎಂದಿದ್ದಾರೆ. ಮತ್ತೊಬ್ಬರು ದಯವಿಟ್ಟು ಉದ್ಯೋಗಿಗಳ ಬಳಿ ಈ ರೀತಿ ನಡೆದುಕೊಳ್ಳಬೇಡಿ ಎಂದು ವಿನಂತಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: 4 ವರ್ಷದ ಬಾಲಕನಿಗೆ ಸಿಗರೇಟ್ ಸೇದಿಸಿದ ಕುಡುಕ ಡಾಕ್ಟರ್- ವಿಡಿಯೊ ವೈರಲ್
ಕೆಲವು ಜನರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಂಪನಿ ಹಲವು ಭಾರೀ ನಡೆದುಕೊಳ್ಳುವ ರೀತಿ ಸರಿ ಇಲ್ಲದೆ ಇರಬಹುದು. ಆದರೆ ರಾಜಿನಾಮೆ ನೀಡುವಾಗ, ಬೇರೆ ಕೆಲಸಕ್ಕಾಗಿ ಹೋಗುವಾಗ ಸರಿಯಾದ ರೀತಿಯಲ್ಲಿ ರಾಜೀನಾಮೆ ನೀಡಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
[ad_2]
Source link