[ad_1]
ಬೆಂಗಳೂರು: ರಾಜ್ಯದಲ್ಲಿ ಡೀಸೆಲ್ ಬೆಲೆ, ಟೋಲ್ ದರ ಹೆಚ್ಚಳ ವಿರೋಧಿಸಿ 3 ದಿನಗಳಿಂದ ಲಾರಿ ಮಾಲೀಕರ ಸಂಘ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ ಅಂತ್ಯವಾಗಿದೆ (Lorry Strike Called Off). ಏ. 14ರಿಂದ ರಾಜ್ಯದಲ್ಲಿ ಮುಷ್ಕರ ನಡೆಸುತ್ತಿದ್ದ ಲಾರಿ ಮಾಲೀಕರೊಂದಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಗುರುವಾರ (ಏ. 17) ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಇದರಿಂದ ರಾಜ್ಯಾದ್ಯಂತ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯವಾಗಿ, ಬೆಲೆ ಏರಿಕೆಯಾಗುತ್ತದೆ ಎನ್ನುವ ಆತಂಕ ಸದ್ಯಕ್ಕೆ ದೂರವಾಗಿದೆ.
ಲಾರಿ ಮಾಲೀಕರ ಬೇಡಿಕೆ ಈಡೇರಿಸಲು ಮುಂದಾಗುವುದಾಗಿ ಸಚಿವ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ ಹಿನ್ನಲೆಯಲ್ಲಿ ಲಾರಿ ಮುಷ್ಕರ ವಾಪಾಸ್ಸು ಪಡೆಯುವುದಾಗಿ ಪದಾಧಿಕಾರಿಗಳು ಘೋಷಿಸಿದರು. ಮುಷ್ಕರ ಆರಂಭವಾದಾಗಿನಿಂದ ನಡೆದ 3ನೇ ಸಂಧಾನ ಸಭೆ ಇದಾಗಿದೆ. ಈ ಹಿಂದನ 2 ಸಭೆಗಳು ವಿಫಲವಾಗಿದ್ದವು. ಗುರುವಾರ ವಿಧಾನಸೌಧದಲ್ಲಿನ ರಾಮಲಿಂಗಾರೆಡ್ಡಿ ಅವರ ಕಚೇರಿಯಲ್ಲಿ ಲಾರಿ ಮಾಲೀಕರ ಸಂಘದೊಂದಿಗೆ ನಡೆಸಿದ 3ನೇ ಬಾರಿ ಸಭೆ ಯಶಸ್ವಿಯಾಗಿದೆ.
ಮುಷ್ಕರ ಹಿಂಪಡೆದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಲಾರಿಗಳ ಓಡಾಟ ಆರಂಭವಾಗಿದೆ. ʼʼನಮ್ಮ ಎಲ್ಲ ಬೇಡಿಕೆ ಈಡೇರಿಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ಹೀಗಾಗಿ ಈ ಕ್ಷಣದಿಂದಲೇ ಲಾರಿ ಮುಷ್ಕರ ವಾಪಸ್ ಪಡೆಯುತ್ತೇವೆʼʼ ಸಭೆಯ ಬಳಿಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಘೋಷಿಸಿದರು.
ಈ ಸುದ್ದಿಯನ್ನೂ ಓದಿ: BY Vijayendra: ಜನಾಕ್ರೋಶ ಯಾತ್ರೆಯ ಮೊದಲ ಹಂತ ಯಶಸ್ವಿ: ಬಿ.ವೈ.ವಿಜಯೇಂದ್ರ
ಮುಷ್ಕರ ಹಿಂಪಡೆದ ಬಳಿಕ ಮಾತನಾಡಿದ ಜಿ.ಆರ್.ಷಣ್ಮುಗಪ್ಪ, ʼʼತಕ್ಷಣದಿಂದಲೇ ಜಾರಿಗೆ ಬರುವಂತೆ ಮುಷ್ಕರ ಪಾವಸ್ ಪಡೆಯುತ್ತೇವೆ. ಸಚಿವರು ಬಹುತೇಕ ಎಲ್ಲ ಬೇಡಿಕೆ ಈಡೇರಿಸಲು ಒಪ್ಪಿಕೊಂಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆʼʼ ಎಂದು ಹೇಳಿದ್ದಾರೆ. 3 ದಿನಗಳ ಮುಷ್ಕರದಿಂದ 4,500 ಕೋಟಿ ರೂ.ಗಿಂತ ಅದಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬೇಡಿಕೆ ಏನಾಗಿತ್ತು?
ಕೂಡಲೇ ಡೀಸೆಲ್ ದರ ಇಳಿಸಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು, ಟೋಲ್ಗಳಲ್ಲಿ ಪೊಲೀಸರು ಲಾರಿ ಚಾಲಕರಿಗೆ ನೀಡುವ ಕಿರುಕುಳ ತಪ್ಪಿಸಬೇಕು, ವಾಹನ ವಿಮೆಯ ದರ ಕಡಿತಗೊಳಿಸುವುದು, ಎಫ್ಸಿ ದರ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಲಾಗಿತ್ತು.
ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರ ಎಪಿಎಂಸಿ ಸೇರಿದಂತೆ ರಾಜ್ಯದ ಹಲವೆಡೆ ಟ್ರಕ್ ನಿಲ್ದಾಣಗಳಲ್ಲಿ ವಾಹನಗಳು ನಿಂತಿರುವುದು ಕಂಡು ಬಂದಿತ್ತು. ಕೆಲವು ಸರಕು ಸಾಗಾಣಿಕೆ ಲಾರಿ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ದಾವಣಗೆರೆ ಸೇರಿದಂತೆ ಪ್ರಮುಖ ನಗರಗಳಲ್ಲಿ ಸರಕು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿದ್ದವು. ಇದೀಗ ಪರಿಸ್ಥಿತಿ ಸಾಧಾರಣ ಸ್ಥಿತಿಗೆ ಮರಳಿದೆ. ಬೆಲೆ ಏರಿಕೆಯಾಗುವ ಭೀತಿಯಲ್ಲಿದ್ದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
[ad_2]
Source link