
ಸ್ವಚ್ಛತಾ ಅಭಿಯಾನವು ಧಾರವಾಡ ನಗರದ ನಾಲ್ಕು ವಲಯಗಳಲ್ಲಿ ನಾಳೆ ಬೆಳಿಗ್ಗೆ 6:30 ಗಂಟೆಯಿಂದ ಏಕಕಾಲಕ್ಕೆ ರೈಲ್ವೆ ಸ್ಟೇಶನ್ (ವನವಾಸಿ ರಾಮಮಂದಿರ) ರಸ್ತೆ, ರಾಮನಗೌಡ ಆಸ್ಪತ್ರೆ ಹತ್ತಿರ, ಶಿವಾಜಿ ಸರ್ಕಲ್ ಹತ್ತಿರ, ಹೆಬ್ಬಳ್ಳಿ ಅಗಸಿ ಹತ್ತಿರ, ಪೌಲ್ ಕ್ಯಾಂಟಿನ್ ಹತ್ತಿರ ಆರಂಭವಾಗಿ, ಮುಂದುವರಿಯುತ್ತದೆ.*ವಿವಿಧ ಸರಕಾರಿ ಇಲಾಖೆಗಳ ಸಿಬ್ಬಂದಿ, ಅಧಿಕಾರಿಗಳಿಗೆ, ಸ್ವಯಂ ಸೇವಕರಿಗೆ, ಸಂಘ, ಸಂಸ್ಥೆಗಳಿಗೆ ಸ್ವಚ್ಛತಾ ಅಭಿಯಾನದ ಅಂಗವಾಗಿ ಸ್ವಚ್ಛಯ ಕಾರ್ಯ ಕೈಗೊಳ್ಳಲು ಪ್ರತ್ಯೇಕವಾಗಿ ಸ್ಥಳಗಳನ್ನು ಗುರುತಿಸಿ, ನೀಡಲಾಗಿದೆ.*ಬೆಳಿಗ್ಗೆ 8 ಗಂಟೆಯಿಂದ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರು, ಧಾರವಾಡ ರೈಲ್ವೆ ಸ್ಟೇಶನ್, ವನವಾಸಿ ರಾಮಮಂದಿರ, ಕಬ್ಬೂರ ರಸ್ತೆ*ಮತ್ತು *ರಾಮನಗೌಡ ಆಸ್ಪತ್ರೆ, ಮಾಳಾಪುರ ಲಾಸ್ಟ್ ಬಸ್ ನಿಲ್ದಾಣ,*ಮತ್ತು*ಶಿವಾಜಿ ಸರ್ಕಲ್, ಹೆಬ್ಬಳ್ಳಿ ಅಗಸಿ, ಚರಂತಿಮಠ ಗಾರ್ಡನ್, ಹೊಸಯಲ್ಲಾಪುರ ರಸ್ತೆ*ಮತ್ತು *ಪೌಲ್ ಕ್ಯಾಂಟಿನ್, ಸರಸಗಂಗಾ ಶಾಲೆ, ಜನ್ನತನಗರ ಪ್ರದೇಶಗಳಿಗೆ ಭೇಟಿ ನೀಡಿ, ವಿಶೇಷ ಸ್ವಚ್ಛತಾ ಅಭಿಯಾನದಲ್ಲಿ ಸ್ವತಃ ಸಚಿವರು ಭಾಗವಹಿಸಲಿದ್ದಾರೆ.*
