[ad_1]
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು(ED Summoned Mahesh Babu) ಅವರಿಗೆ ಇಡಿ ಸಮನ್ಸ್ ಜಾರಿಗೊಳಿಸಿದೆ. ಮೂಲಗಳ ಪ್ರಕಾರ ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಈ ಸಂಸ್ಥೆಯ ಪ್ರಚಾರಕ್ಕಾಗಿ ಮಹೇಶ್ ಬಾಬು ಅವರು 5.9 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ. ನಟನಿಗೆ ಪಾವತಿಸಿದ ಹಣವು ಅಕ್ರಮ ಎಂದು ಶಂಕಿಸಲಾಗಿದೆ ಎಂದು ED ಯ ಮೂಲಗಳು ಹೇಳಿದ್ದು, ಇದು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇನ್ನು ಮಹೇಶ್ ಬಾಬು ಏಪ್ರಿಲ್ 28 ರಂದು ಇಡಿ ಮುಂದೆ ಹಾಜರಾಗಲಿದ್ದಾರೆ.
ಏನಿದು ಪ್ರಕರಣ?
ಸುರಾನ್ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ನಲ್ಲಿ ಸಾಕಷ್ಟು ಅಕ್ರಮಗಳು ನಡೆದಿರೋದು ಬೆಳಕಿಗೆ ಬಂದಿದೆ. ರಿಯಲ್ ಎಸ್ಟೇಟ್ ಡೀಲಿಂಗ್ ವೇಳೆ ಭಾರೀ ಅಕ್ರಮ ನಡೆದಿದೆ. ಈ ಎರಡೂ ಕಂಪನಿಗಳ ಪರವಾಗಿ ಮಹೇಶ್ ಬಾಬು ತಮ್ಮ ಪತ್ನಿ ಮತ್ತು ಮಕ್ಕಳ ಸಮೇತ ಪ್ರಚಾರ ನಡೆಸಿದ್ದರು. ಇದೀಗ ಕಂಪನಿಗಳು ಎಸಗಿರುವ ಭಾರೀ ಅಕ್ರಮದಲ್ಲಿ ಮಹೇಶ್ ಬಾಬು ಅವರೂ ಶಾಮೀಲಾಗಿದ್ದಾರೆ ಎಂಬ ಅನುಮಾನವನ್ನು ಇಡಿ ಅಧಿಒಕಾರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಯಲಿದೆ. ಮಹೇಶ್ ಬಾಬು ಅವರು ಇದರ ಪ್ರಚಾರ ಮಾಡಿದ್ದರಿಂದ ಅನೇಕರು ಇದರಲ್ಲಿ ಹೂಡಿಕೆ ಮಾಡಿದ್ದಾರೆ. ಪ್ರಕರಣದಲ್ಲಿ ಮಹೇಶ್ ಬಾಬು ನೇರವಾಗಿ ಭಾಗಿಯಾಗದೇ ಇದ್ದರೂ ಅವರು ಜಾಹೀರಾತಿಗಾಗಿ ಪಡೆದ ಹಣದ ಮೂಲ ಅಕ್ರಮವೇ ಎಂಬ ಬಗ್ಗೆ ಇಡಿ ತನಿಖೆಗೆ ಮುಂದಾಗಿದೆ.
ಈ ಸುದ್ದಿಯನ್ನೂ ಓದಿ: Rajamouli: ಮಹೇಶ್ ಬಾಬು ನಟನೆಯ SSMB 29 ಚಿತ್ರದ ಶೂಟಿಂಗ್ ವಿಡಿಯೊ ಲೀಕ್; ಸೆಟ್ಗೆ ಬಿಗಿ ಭದ್ರತೆ
ವರದಿಗಳು ತಿಳಿಸಿದಂತೆ, ಮಹೇಶ್ ಬಾಬು ಈ ಪ್ರಚಾರಕ್ಕೆ 5.9 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದಾರೆ. ಚೆಕ್ ಮೂಲಕ 3.4 ಕೋಟಿ ರೂಪಾಯಿ ಮತ್ತು ನಗದು ಮೂಲಕ 2.5 ಕೋಟಿ ರೂಪಾಯಿ ಸ್ವೀಕರಿಸಿದ್ದಾರೆ. ಇದೀಗ, ನಗದು ಪಾವತಿಗಳು ಪರಿಶೀಲನೆಗೆ ಒಳಪಟ್ಟಿವೆ.
ನಟನ ಸಿನಿಮಾ ವಿಚಾರ ಗಮನಿಸೋದಾದ್ರೆ, ಮುಂದಿನ ಬಹುನಿರೀಕ್ಷಿತ ಚಿತ್ರ ‘ಎಸ್ಎಸ್ಎಂಬಿ29’. ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾಗೆ ಬಾಹುಬಲಿ, ಆರ್ಆರ್ಆರ್ ಖ್ಯಾತಿಯ ಎಸ್.ಎಸ್. ರಾಜಮೌಳಿ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇತ್ತಿಚೆಗೆ ಚಿತ್ರದ ಸೆಟ್ಗಳ, ಕಲಾವಿದರ ಫೋಟೋಗಳು ವೈರಲ್ ಆಗಿ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಇತ್ತೀಚೆಗೆ, ಆರ್ಆರ್ಆರ್ ನಿರ್ದೇಶಕರು ಒಡಿಶಾದ ಕೊರಾಪುಟ್ನಲ್ಲಿ ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಅಧಿಕೃತ ಘೋಷಣೆಗಳು ಆಗಿಲ್ಲ. ಅಭಿಮಾನಿಗಳು, ಸಿನಿಪ್ರಿಯರು ಚಿತ್ರತಂಡದಿಂದ ಅಧಿಕೃತ ಮಾಹಿತಿ ನಿರೀಕ್ಷಿಸಿದ್ದಾರೆ.
[ad_2]
Source link