[ad_1]
ಚಂಡೀಗಢ: ಗುರುಗ್ರಾಮ್-ಫರಿದಾಬಾದ್ ರಸ್ತೆಯ ಶಿವ ನಾಡರ್ ಶಾಲೆಯ ಬಳಿ 30ರಿಂದ 35 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಸೂಟ್ಕೇಸ್ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾರಿಹೋಕರೊಬ್ಬರು ರಸ್ತೆಯಲ್ಲಿ ಬಿದ್ದಿದ್ದ ಕಪ್ಪು ಸೂಟ್ಕೇಸ್ ಅನ್ನು ನೋಡಿದಾಗ ಅದರ ಸುತ್ತಲೂ ನೊಣಗಳ ಹಿಂಡು ಸುತ್ತುತ್ತಿರುವುದನ್ನು ಗಮನಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸೂಟ್ಕೇಸ್ ತೆರೆದಾಗ, ಮಹಿಳೆಯ ಕೊಳೆತ ದೇಹ ಪತ್ತೆಯಾಗಿದೆ. ವಿಧಿವಿಜ್ಞಾನ ತಂಡಗಳನ್ನು ತಕ್ಷಣ ಕರೆಸಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಪೊಲೀಸರು ಕೊಲೆ (Murder Case) ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮತ್ತು ಸಾಕ್ಷ್ಯ ನಾಶದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಪೊಲೀಸರು ಬೆರಳಚ್ಚಿಗಾಗಿ ಅಪರಾಧದ ಸ್ಥಳದ ಬಗ್ಗೆ ತನಿಖೆ ನಡೆಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಹತ್ತಿರದ ಪ್ರದೇಶಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ ಮತ್ತು ಅವಳ ದೇಹವನ್ನು ಪ್ಲ್ಯಾನ್ ಮಾಡಿ ಇಲ್ಲಿಗೆ ತಂದು ವಿಲೇವಾರಿ ಮಾಡಲಾಗಿದೆ ಎಂದು ಸೂಚಿಸುತ್ತದೆ. ಇದು ಸೈಕೋ ಕಿಲ್ಲರ್ ಕೆಲಸವಾಗಿರಬಹುದು ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಇತ್ತ ಸಂತ್ರಸ್ತೆಯ ಶರೀರದ ಮೇಲಿನ ವಿಶಿಷ್ಟ ಗುರುತುಗಳನ್ನು ಗಮನಿಸಿ ಅವರ ಗುರುತು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಎಡ ಭುಜದ ಮೇಲೆ ‘ಮಾ’ (ತಾಯಿ) ಎಂಬ ಪದವನ್ನು ಹಚ್ಚೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತರ ಬಗ್ಗೆ ಮಾಹಿತಿ ಸಂಗ್ರಹಿಸುವವರಿಗೆ ಗುರುಗ್ರಾಮ್ ಪೊಲೀಸರು 25,000 ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದ ದೇವರಿಯಾದಲ್ಲಿ ಕೃಷಿ ಭೂಮಿಯೊಂದರಲ್ಲಿ ಸೂಟ್ಕೇಸ್ನಲ್ಲಿ ಶವವೊಂದು ಪತ್ತೆಯಾಗಿದ್ದು, ತನಿಖೆಯಿಂದ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಓರ್ವ ಮಹಿಳೆ ತನ್ನ ಸೋದರಳಿಯನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಮಹಾಕುಂಭಮೇಳ ಗಳಿಕೆಯಿಂದ ಎಸ್ಯುವಿ ಕಾರು ಖರೀದಿಸಿದ ಬಾಬಾ; ನೆಟ್ಟಿಗರು ಫುಲ್ ಶಾಕ್! ವಿಡಿಯೊ ನೋಡಿ
ದೇವರಿಯಾದ ಪಕರಿ ಛಪ್ಪರ್ ಪಟ್ಖೌಲಿ ಗ್ರಾಮದ ಕೃಷಿ ಭೂಮಿಯಲ್ಲಿ ಅನುಮಾನಸ್ಪಾದ ಟ್ರಾಲಿ ಸೂಟ್ಕೇಸ್ವೊಂದು ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು, ಸಂಶಯಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸೂಟ್ಕೇಸ್ ತೆರೆದಾಗ, ಪುರುಷನ ಶವವೊಂದು ಕಂಡುಬಂದಿದೆ. ಕೂಡಲೇ ಫೊರೆನ್ಸಿಕ್ ತಂಡ ಮತ್ತು ಶ್ವಾನ ದಳಕ್ಕೆ ಕರೆ ನೀಡಿದ ಪೊಲೀಸರು, ಶವದ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಸೂಟ್ಕೇಸ್ನಲ್ಲಿ ದೊರೆತ ವಿಳಾಸ ಚೀಟಿಯೊಂದು ಪೊಲೀಸರಿಗೆ ಸುಳಿವು ನೀಡಿದ್ದು, ಅದನ್ನು ಆಧರಿಸಿ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದರು. ಕೊಲೆಯಾದ ವ್ಯಕ್ತಿಯನ್ನು ನೌಷಾದ್ (30) ಎಂದು ಪತ್ತೆ ಹಚ್ಚಿದ ಪೊಲೀಸರು ನೌಷಾದ್ನ ಪತ್ನಿ ರಜಿಯಾ ಸುಲ್ತಾನಾ (30)ನನ್ನು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಆಕೆಯೇ ನೌಷಾದ್ನ ಸೋದರಳಿಯ ರೋಮನ್ (27)ನ ಜತೆ ಸೇರಿ ಈ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ.
[ad_2]
Source link