

ನೂತನ ಸಮಿತಿಗೆ ಅಧ್ಯಕ್ಷರಾಗಿ ಬಿ.ವೈ. ಪಾಟೀಲ್ (9498221600) ಮತ್ತು ಸದಸ್ಯರಾಗಿ ನೂರ್ಜಹಾನ್ ಎಂ. ಕಿಲ್ಲೇದಾರ್ (9945564952), ಸುಚಿತ್ರಾ ಕಡಿಬಾಗಿಲು (7676696754), ರವಿ ಭಂಡಾರಿ (9739935029) ಆಯ್ಕೆ ಆಗಿದ್ದಾರೆ.ಧಾರವಾಡ ಜಿಲ್ಲೆಯಲ್ಲಿ ವಿವಿಧ ಸಂಕಷ್ಟ ಪರಿಸ್ಥಿತಿಯಲ್ಲಿರುವ ಹಾಗೂ ಪಾಲನೆ, ಪೋಷಣೆ ಮತ್ತು ರಕ್ಷಣೆ ಅಗತ್ಯತೆ ಇರುವ 0 ದಿಂದ 18 ವರ್ಷದ ಒಳಗಿನ ಮಕ್ಕಳ ಪುನರ್ವಸತಿಗಾಗಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಧಾರವಾಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯನ್ನು 2025-26 ರಿಂದ ಮುಂದಿನ 3 ವರ್ಷಗಳ ಅವಧಿವರೆಗೆ ಪುನರ್ ರಚಿಸಲಾಗಿದೆ. ಜಿಲ್ಲೆಯಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿರುವ ಅಂದರೆ ಬಾಲ್ಯವಿವಾಹಕ್ಕೆ ಒಳಗಾದ, ಲೈಂಗಿಕ,ದೈಹಿಕ ದೌರ್ಜನ್ಯಕ್ಕೆ ಒಳಗಾದ, ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡ, ಬಾಲಕಾರ್ಮಿಕ ಮಕ್ಕಳು, ಮನೆ ಬಿಟ್ಟು ಓಡಿ ಹೋದ ಮಕ್ಕಳು, ದುಶ್ಚಟಕ್ಕೆ ಬಲಿಯಾದ, ದತ್ತು ಪ್ರಕ್ರಿಯೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಮಕ್ಕಳ ಪ್ರಕರಣಗಳನ್ನು ಈ ಸಮಿತಿ ನಿರ್ವಹಿಸಲಿದೆ. ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಿವಿಲ್ ನ್ಯಾಯಾಧೀಶರ ಅಧಿಕಾರವನ್ನು ಶಾಸನಬದ್ಧವಾಗಿ ಹೊಂದಿರುತ್ತಾರೆ. ಹಲವಾರು ವರ್ಷಗಳಿಂದ ಮಕ್ಕಳ ಸೇವೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಂ.ಎಸ್.ಡಬ್ಲ್ಯೂ ಅಥವಾ ಸಮಾಜಶಾಸ್ತ್ರ ವಿಷಯಗಳಲ್ಲಿ ಸ್ನಾನಕೋತ್ತರ ಪದವಿಯೊಂದಿಗೆ ಕಾನೂನಿನ ವಿಷಯದಲ್ಲಿ, ಸ್ನಾನಕೋತ್ತರ ಪದವಿ, ಪದವಿ ಪಡೆದವರನ್ನು ಈ ಸಮಿತಿಗೆ ಕರ್ನಾಟಕ ರಾಜ್ಯದ ರಾಜ್ಯಪಾಲರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸಮಿತಿಯು ಜಿಲ್ಲಾ ಆಡಳಿತದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಇತರೆ ಇಲಾಖೆಗಳಾದ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಹಾಗೂ ಪ.ಜಾಮತ್ತು ಪ.ಪಂ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಸಹಯೋಗದೊಂದಿಗೆ ಸಮಿತಿ ಕಾರ್ಯನಿರ್ವಹಿಸಲಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಕಚೇರಿ ವಿಳಾಸ:ಬಾಲಕಿಯರ ಸಿ/ಒ ಮಕ್ಕಳ ಮನೆ, ಬೆಂಡಿಗೇರಿ ಪೊಲೀಸ್ ಠಾಣೆ ಹಿಂದೆ, ಗಂಟಿಕೇರಿ, ಹುಬ್ಬಳ್ಳಿ. ಜಿಲ್ಲೆ: ಧಾರವಾಡ ಇಲ್ಲಿಗೆ ಅಥವಾ ದೂರವಾಣಿ : 0836-2363388 ಮೊಬೈಲ್ : 9483501388 ಗೆ ತಮ್ಮ ದೂರು, ಸಮಸ್ಯೆಗಳನ್ನು ಸಲ್ಲಿಸಬಹುದು ಹಾಗೂ ದೂರು, ಸಮಸ್ಯೆಗಳನ್ನು ಇ-ಮೇಲ್ cwcdwd@gmail.com ಮೂಲಕವು ಸಲ್ಲಿಸಬಹುದಾಗಿದೆ.

ಜಿಲ್ಲೆಯಲ್ಲಿ ಸಂಕಷ್ಟ ಪರಿಸ್ಥಿತಿಗೆ ಒಳಪಟ್ಟ ಜಿಲ್ಲೆಯ ಅಥಬಾ ಬೇರೆ ಜಿಲ್ಲೆಗಳ ಹಾಗೂಹೊರ ರಾಜ್ಯಗಳ ಮಕ್ಕಳು ಸಹ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಸಂಪರ್ಕಿಸಬಹುದು ಹಾಗೂ ಮಕ್ಕಳ ಸಹಾಯವಾಣಿ 1098 ಅಥವಾ ಪೊಲೀಸ್ ಸಹಾಯವಾಣಿ 112 ಗೆ ಉಚಿತಬಾಗಿ ಕರೆ ಮಾಡಿ, ತಿಳಿಸಬಹುದು. ಮಕ್ಕೂ ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.