
ಕನ್ನಡ ಬೆಳ್ಳಿ ಪರದೆಯ ಮಹಾನ್ ನಟಿ,ಅಭಿನಯ ಶಾರದೆ, ಪಂಚಭಾಷೆ ತಾರೆ,ಪದ್ಮಭೂಷಣ,ಪದ್ಮಶ್ರೀ ಪ್ರಶಸ್ತಿ ವಿಜೇತೆ ಬಿ ಸರೋಜಾದೇವಿ (87) ಸಾವನಪ್ಪಿದ್ದಾರೆ..
ಹಿರಿಯ ನಟಿ ಸರೋಜಾದೇವಿ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಮಲ್ಲೆಶ್ವರಂ ಖಾಸಗಿ ಆಸ್ಪತ್ರೆಯಲ್ಲಿ ಇಂದು ತಮ್ಮ ಕೊನೆಯ ಉಸಿರು ಎಳೆದಿದ್ದಾರೆ..
ಕಲೆಯ ಬದುಕಿನ ಪಯಣ ಮು ಗಿಸಿದ ಮಹಾನ್ ಮಾದರಿ ನಟಿ, ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿದವರು. 200 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದ ನಟಿ ಇಂದು ನಮ್ಮನ ಅಗಲಿದ್ದಾರೆ..

2019 ರಲ್ಲಿ ತೆರೆಕಂಡ ನಟಸಾರ್ವಭೌಮ ಅವರ ಕೊನೆಯ ಚಿತ್ರವಾಗಿದ್ದು, ಹಿರಿಯ ನಟಿಯ ನಿಧನಕ್ಕೆ ಇಡೀ ಚಿತ್ರರಂಗದಿಂದ ಕಂಬನಿ ಮಿಡಿದಿದ್ದಾರೆ. ಡಾ.ರಾಜಕುಮಾರವರ ಜೊತೆ ಬಬ್ರುವಾಹನದಲ್ಲಿ ಚಿತ್ರಾಂಗದೆಯಾಗಿ ಅಭೂತಪೂರವ ನಟನೆ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ ನಟಿ ಬಾರದ ಊರಿಗೆ ತಮ್ಮ ಪಯಣ ಬೆಳಸಿದ್ದಾರೆ…
