[ad_1]
ಬೆಳಗಾವಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಿಲುಕಿ ಬಾಣಂತಿ ಎಂಬುದನ್ನು ಲೆಕ್ಕಿಸದೇ ಮನೆಯಿಂದ ಹೊರ ಹಾಕಿದ್ದ ಕುಟುಂಬವೊಂದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar), ಫೈನಾನ್ಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಕುಟುಂಬವನ್ನು ಮರಳಿ ಮನೆಗೆ ಸೇರಿಸಿರುವ ಅಪರೂಪದ ಘಟನೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜರುಗಿದೆ.
ಮೈಕ್ರೋ ಫೈನಾನ್ಸ್ನಿಂದ ಮನೆ ಕಟ್ಟಲು ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಲೋಹಾರ್ ಕುಟುಂಬ ಐದು ಲಕ್ಷ ರೂ. ಸಾಲ ಪಡೆದುಕೊಂಡಿತ್ತು. ಕುಟುಂಬ ಸದಸ್ಯರ ಅನಾರೋಗ್ಯದ ಹಿನ್ನಲೆಯಲ್ಲಿ ಕೆಲ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಹೆಚ್ಚಿನ ಬಡ್ಡಿ ವಿಧಿಸಿ ಕೂಡಲೇ ಕಟ್ಟುವಂತೆ ತಕರಾರು ಎತ್ತಿದ್ದ ಫೈನಾನ್ಸ್ ಸಿಬ್ಬಂದಿ, ಇಡೀ ಕುಟುಂಬವನ್ನು ಮನೆಯಿಂದ ಹೊರಹಾಕಿ ಬಾಗಿಲಿಗೆ ಬೀಗ ಜಡಿದಿದ್ದರು. ವಿಪರ್ಯಾಸವೆಂದರೆ ಹೆರಿಗೆ ನಂತರ ತಾಯಿ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದ ಬಾಣಂತಿಯನ್ನು ಮನೆಯಿಂದ ಆಚೆ ಹಾಕಲಾಗಿತ್ತು.
ಈವರೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮನೆಯಿಂದ ಆಚೆ ಹೊರಬಿದ್ದ ಕುಟುಂಬಗಳು ವಾಪಸ್ ಮನೆಗೆ ಹೋಗಬೇಕಾದರೆ ಸಂಪೂರ್ಣ ಸಾಲ ಮರುಪಾವತಿಸಿ ಹೋಗಿರುವ ಉದಾಹರಣೆ ಮಧ್ಯೆ, ಓರ್ವ ಸಚಿವರೊಬ್ಬರು ಫೈನಾನ್ಸ್ ಅವರೊಂದಿಗೆ ಮಾತುಕತೆ ನಡೆಸಿ, ನಿರಾಶ್ರಿತರ ಕುಟುಂಬಕ್ಕೆ ನೆರವಾಗಿದ್ದು, ರಾಜ್ಯದಲ್ಲಿ ಇದೇ ಮೊದಲು. ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡಾ ಅದೆಲ್ಲವನ್ನೂ ಲೆಕ್ಕಿಸದೇ ಕುಟುಂಬದ ಸಹಾಯಕ್ಕೆ ಧಾವಿಸಿದ್ದು ವಿಶೇಷ.
ಈ ಸುದ್ದಿಯನ್ನೂ ಓದಿ | Padma Awards 2025: ಕರ್ನಾಟಕದ ಮಡಿಲಿಗೆ 3 ಪದ್ಮಶ್ರೀ ಪ್ರಶಸ್ತಿ
[ad_2]
Source link