[ad_1]
ಬೆಂಗಳೂರು: ನಗರದಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಮತ್ತೊಂದು ಅಗ್ನಿ ಅವಘಡ (Fire accident) ಸಂಭವಿಸಿದ್ದು, ಆಟೋ ಮೊಬೈಲ್ ಅಂಗಡಿಯೊಂದು ಹೊತ್ತಿ ಉರಿದಿದೆ. ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಆಟೋ ಮೊಬೈಲ್ ಅಂಗಡಿ ಹೊತ್ತಿ ಉರಿದಿದೆ. ಅಗ್ನಿ ಶಾಮಕ ಸಿಬ್ಬಂದಿ ಸರಿಯಾದ ಸಮಯಕ್ಕೆ ಆಗಮಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಈ ಮೂಲಕ ಸುತ್ತಮುತ್ತಲಿನ ಅಂಗಡಿಗಳು ಬೆಂಕಿಯಿಂದ ಬಚಾವ್ ಆಗಿವೆ. ಆಟೋ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡದಿಂದ ಬರೋಬ್ಬರಿ 4 ಕೋಟಿ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸದ್ಯ ಸ್ಥಳಕ್ಕಾಗಮಿಸಿದ ಅಗ್ಮಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕಳೆದ ತಿಂಗಳು ವೀರಣ್ಣಪಾಳ್ಯದಲ್ಲಿ ಅಗ್ನಿ ಅವಘಢ ಸಂಭವಿಸಿತ್ತು. . ಘಟನೆಯಲ್ಲಿ 40 ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಶೆಡ್ ಗಳು ಸುಟ್ಟು ಭಸ್ಮವಾಗಿದ್ದವು. ಕಾರ್ಮಿಕರ ಶೆಡ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ 40 ಕ್ಕೂ ಹೆಚ್ಚು ಶೆಡ್ ಗಳು ಬೆಂಕಿಗಾಹುತಿಯಾಗಿವೆ. ಇನ್ನು ಆಟಿಕೆ ಫ್ಯಾಕ್ಟರಿ ಕಾರ್ಮಿಕರಿಗಾಗಿ 50 ಶೆಡ್ ಗಳನ್ನು ನಿರ್ಮಿಸಲಾಗಿತ್ತು. ಈ ಪೈಕಿ 40 ಶೆಡ್ ಗಳು ಸುಟ್ಟು ಹೋಗಿದ್ದವು. ಅನೇಕ ವರ್ಷಗಳಿಂದ ಮಕ್ಕಳು, ಮಹಿಳೆಯರು ಚಿಕ್ಕ ಚಿಕ್ಕ ಶೆಡ್ಗಳಲ್ಲಿ 100ಕ್ಕೂ ಹೆಚ್ಚು ಜನರು ಇಲ್ಲೇ ವಾಸವಿದ್ದರು. ಬೆಂಕಿಯ ಜ್ವಾಲೆಗೆ ಶೆಡ್ಗಳು ಬೆಂಕಿಗಾಹುತಿ ಹಿನ್ನಲೆ ರಾತ್ರಿಯಿಡಿ ದೇಗುಲದ ಅಂಗಳದಲ್ಲಿ ಮಲಗಿದ್ದರು.
ಈ ಸುದ್ದಿಯನ್ನೂ ಓದಿ: Fire Accident: ಕರಾಳ ಭಾನುವಾರ; ಹೈದರಾಬಾದ್ ಜತೆಗೆ ಮಹಾರಾಷ್ಟ್ರದಲ್ಲಿಯೂ ಬೆಂಕಿ ಅವಘಡ: 8 ಮಂದಿ ಸಜೀವ ದಹನ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ: ನಾಲ್ಕು ಅಂಗಡಿಗಳು ಸುಟ್ಟು ಭಸ್ಮ
ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ಕು ಅಂಗಡಿಗಳು ಸುಟ್ಟು ಕರಕಲಾಗಿರುವಂತಹ ಘಟನೆ ಕಲಬುರಗಿಯ ರಾಮ ಮಂದಿರ ಸರ್ಕಲ್ ಬಳಿ ನಡೆದಿದೆ. ಎಲೆಕ್ಟ್ರಿಕ್ ಶಾಪ್, ಗಾಣದ ಎಣ್ಣೆ ತಯಾರಿಕ ಘಟಕ, ಹಾರ್ಡ್ವೇರ್ ಶಾಪ್ ಮತ್ತು ಒಂದು ಟೀ ಸ್ಟಾಲ್ ಸುಟ್ಟು ಭಸ್ಮವಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
[ad_2]
Source link