[ad_1]
ಇಸ್ಲಾಮಾಬಾದ್: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂದೂರ್ (Operation Sindoor 2.0) ನಡೆಸಿ ಭಯೋತ್ಪಾದಕರನ್ನು ಹತ್ಯೆ ಮಾಡಿದ ಬಳಿಕ ಭಾರತೀಯ ಸೇನೆ ಮತ್ತೆ ಎರಡನೇ ಬಾರಿಗೆ ದಾಳಿ ಪ್ರಾರಂಭಿಸಿದೆ. ಲಾಹೋರ್ ಮತ್ತು ಕರಾಚಿ ಮೇಲೆ ದಾಳಿ ಬಳಿಕ ಇದೀಗ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಹೊಸ ಸ್ಫೋಟಗಳು ವರದಿಯಾಗಿವೆ. ಪಾಕಿಸ್ತಾನದ ಮಿಲಿಟರಿ ಪ್ರಧಾನ ಕಚೇರಿ ಬಳಿ ಸ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾವಲ್ಪಿಂಡಿಯ ಹೊರತಾಗಿ, ಗುಜ್ರಾನ್ವಾಲಾ, ಚಕ್ವಾಲ್, ಅಟ್ಟಾಕ್, ಬಹಾವಲ್ಪುರ್, ಮಿಯಾನೋ ಮತ್ತು ಚೋರ್ಗಳಲ್ಲಿಯೂ ಸ್ಫೋಟಗಳು ವರದಿಯಾಗಿವೆ. ರಾವಲ್ಪಂಡಿ ಕ್ರಿಕೆಟ್ ಮೈದಾನದ ಬಳಿಯೇ ಸ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಸಿಯಾಲ್ಕೋಟ್ ಮತ್ತು ಲಾಹೋರ್ನಲ್ಲಿರುವ ಪಾಕಿಸ್ತಾನ ಸೇನೆಯ ವಾಯು ರಕ್ಷಣಾ ಘಟಕದ ಮೇಲೆ ಭಾರತ ಮತ್ತೆ ದಾಳಿ ನಡೆಸಿದೆ. ಭಾರತದ 15 ನಗರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಪ್ಲ್ಯಾನ್ ಮಾಡಿದ್ದು, ಆದರೆ ಭಾರತೀಯ ಸೇನೆಯು ಇದನ್ನು ವಿಫಲಗೊಳಿಸಿದೆ. ಪಾಕಿಸ್ತಾನದ ಡಿಫೆನ್ಸ್ ಸಿಸ್ಟಮ್ HQ-9 ಧ್ವಂಸಗೊಳಿಸಿದೆ ಎಂದು ತಿಳಿದು ಬಂದಿದೆ.
[ad_2]
Source link