[ad_1]
ಬೆಂಗಳೂರು: ಆರ್ಯಭಟ ಸಾಂಸ್ಕೃತಿಕ ಸಂಸ್ಥೆೆಯ 50ನೇ ವರ್ಷದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಸೇರಿದಂತೆ 63 ಸಾಧಕರಿಗೆ ಆರ್ಯಭಟ ಪ್ರಶಸ್ತಿ ಪ್ರಕಟಿಸಲಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಮೇ 22ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿಯನ್ನು ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್, ಡಾ.ಜಯಮಾಲಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕೆ.ಕಲ್ಯಾಣ್ ಹಾಗೂ ದೇಶದ 63 ಸಾಧಕರು ಸೇರಿ ಅನಿವಾಸಿ ಭಾರತೀಯರಾದ ಡಾ.ಸುಧಾಕರ್ ರಾವ್, ಮಂದಾರ ಶೆಟ್ಟಿ, ಭಾವನ ಪ್ರದ್ಯುಮ್ನ, ನಿತಿನ್ ಶ್ರೀವಾಸ್ತವ, ಎಸ್.ಡಿ.ಟಿ.ಪ್ರಸಾದ್, ಸುಮಾ ಮಹೇಶ್ ಗೌಡ, ಶ್ವೇತಾರಾಮ್, ದೀಪಕ್.ಎಸ್.ಪಿ ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ನ್ಯಾಯಮೂರ್ತಿ ಡಾ.ಅಶೋಕ್.ಬಿ.ಹಿಂಚಿಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ, ಆರ್ಯಭಟ ಸಂಸ್ಥೆೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಎಲ್.ಎನ್.ರಾವ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ವಾನ್ ಎಚ್.ಎಸ್.ವೇಣುಗೋಪಾಲ್ ಅವರು ವಿಶೇಷವಾಗಿ 50 ಕೊಳಲು ವಾದಕರಿಂದ ಸಾಮೂಹಿಕ ಕೊಳಲು ವಾದನ ನಡೆಸಿಕೊಡಲಿದ್ದಾರೆ.
ಈ ಸುದ್ದಿಯನ್ನೂ ಓದಿ | Vishweshwar Bhat Column: ನನ್ನ ಜೀವನದ ದೊಡ್ಡ ರೋಲ್ ಮಾಡೆಲ್ ಅಂದ್ರೆ ಜಿರಳೆ !
[ad_2]
Source link