[ad_1]
ತಿರುವನಂತಪುರಂ: ಇತ್ತೀಚೆಗೆ ನದಿಯಲ್ಲಿ ದೊಡ್ಡದಾದ ಅನಾಕೊಂಡವೊಂದು ಹರಿದುಕೊಂಡು ಹೋಗುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿತ್ತು.ಇದೀಗ ಕೇರಳದ ಎರ್ನಾಕುಲಂ ಜಿಲ್ಲೆಯ ಎಡತಲಾ ಪಟ್ಟಣದ ರಸ್ತೆಯೊಂದರಲ್ಲಿ ಆಸ್ಟ್ರಿಚ್ ನಡೆದುಕೊಂಡು ಹೋಗುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ಅಸಾಮಾನ್ಯ ದೃಶ್ಯವನ್ನು ಕೆಲವರು ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು(Viral video), ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಆಸ್ಟ್ರಿಚ್ ಪಕ್ಷಿಯು ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಸೆರೆಯಾಗಿದೆ. ಇದನ್ನು ಕಂಡು ದಾರಿಹೋಕರು ಹಾಗೂ ಪಾದಚಾರಿಗಳು ಮತ್ತು ವಾಹನ ಚಾಲಕರು ಶಾಕ್ ಆಗಿದ್ದಾರೆ. ಇನ್ನು ಕೆಲವರು ಇದನ್ನು ಕಂಡು ಖುಷಿಪಟ್ಟಿದ್ದಾರೆ. ಅದೂ ಅಲ್ಲದೇ, ಒಬ್ಬ ವ್ಯಕ್ತಿಯು ಆಸ್ಟ್ರಿಚ್ ಕಡೆಗೆ ಸನ್ನೆ ಮಾಡುತ್ತಾ ಅದಕ್ಕೆ ದಾರಿಯನ್ನು ತೋರಿಸಿದಾಗ ಅದು ಅವನ ಸೂಚನೆಗಳಿಗೆ ಪ್ರತಿಕ್ರಿಯಿಸಿದೆ ಮತ್ತು ಟ್ರಾಫಿಕ್ ರೂಲ್ಸ್ ಅನ್ನು ಅರ್ಥಮಾಡಿಕೊಂಡು ನಿಧಾನಕ್ಕೆ ನಡೆದುಕೊಂಡು ಹೋಗಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಇದು ಕೂಡಲೇ ವೈರಲ್ ಆಗಿ 7.5 ಮಿಲಿಯನ್ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ.
ವಿಡಿಯೊ ಇಲ್ಲಿದೆ ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನೆಟ್ಟಿಗರು ಇದಕ್ಕೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಹಕ್ಕಿಯ ಶಾಂತ ವರ್ತನೆ ಮತ್ತು ರಸ್ತೆಯಲ್ಲಿ ನಡೆದುಕೊಂಡು ಹೋದ ಬಗ್ಗೆ ಜೋಕ್ಗಳು, ಮೀಮ್ಗಳನ್ನು ಹಂಚಿಕೊಂಡಿದ್ದಾರೆ. “ಆ ಹಕ್ಕಿಗೆ ಇಲ್ಲಿನ ವಾಹನ ಚಾಲಕರಿಗಿಂತ ರಸ್ತೆ ಬಗ್ಗೆ ಹೆಚ್ಚಿನ ಅರಿವು ಇದೆ” ಎಂದು ಒಬ್ಬರು ಬರೆದಿದ್ದಾರೆ. “ಕೇರಳದಲ್ಲಿ ಹೆಚ್ಚಾಗಿ ದೇವಾಲಯದಲ್ಲಿ ಆನೆಗಳು, ರಸ್ತೆಗಳಲ್ಲಿ ಪಕ್ಷಿಗಳು ಇಂತದ್ದೇ ಈ ವಿಷಯಗಳಿಗೆ ಸುದ್ದಿಯಾಗುತ್ತದೆ” ಎಂದು ಮತ್ತೊಬ್ಬ ವ್ಯಕ್ತಿ ತಮಾಷೆ ಮಾಡಿದ್ದಾರೆ. “ಆಸ್ಟ್ರಿಚ್ ನಡೆದುಕೊಂಡು ಹೋಗುವಾಗ ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ಕಲ್ಪಿಸಿಕೊಳ್ಳಿ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ. “ಪಕ್ಷಿಗೆ ಮಾರ್ಗದರ್ಶನ ಮಾಡುತ್ತಿದ್ದ ವ್ಯಕ್ತಿ ಟ್ರಾಫಿಕ್ ಪೊಲೀಸ್ ಹುದ್ದೆಗೆ ಅರ್ಹ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ತಂದೆಯನ್ನೇ ಫೂಲ್ ಮಾಡಿದ ಕಿಲಾಡಿ ಮಗಳು; ಸಿಕ್ಕಾಪಟ್ಟೆ ಫನ್ನಿಯಾಗಿದೆ ಈ ವಿಡಿಯೊ ನೋಡಿ!
ಈ ವಿಚಿತ್ರ ಘಟನೆಯ ಬಗ್ಗೆ ಎಡತಲ ಪಂಚಾಯತ್ ಅಧ್ಯಕ್ಷೆ ಲಿಜಿ ರಾಕೇಶ್ ಮಾಹಿತಿ ನೀಡಿದ್ದು, ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಇದನ್ನು ಸಾಕುತ್ತಿದ್ದಾರೆ. ಮೂರು ಅಥವಾ ನಾಲ್ಕು ಪಕ್ಷಿಗಳಲ್ಲಿ ಆಸ್ಟ್ರಿಚ್ ಕೂಡ ಒಂದು. ಒಂದು ಆಸ್ಟ್ರಿಚ್ ತಪ್ಪಿಸಿಕೊಂಡು ರಸ್ತೆಗೆ ಬಂದಿತು. ಅದನ್ನು ಕಂಡು ಜನರು ಶಾಕ್ ಆಗಿ ಫೋಟೋಗಳು ಮತ್ತು ವಿಡಿಯೊಗಳನ್ನು ತೆಗೆದುಕೊಂಡಿದ್ದಾರೆ” ಎಂದು ಈ ಪ್ರಕರಣದ ಕುರಿತು ತಿಳಿಸಿದ್ದಾರೆ.
[ad_2]
Source link