[ad_1]
ಲಖನೌ:
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಉದ್ಘಾಟಿಸಿದ್ದ ಮಾವುಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಮಾವಿನ ಹಣ್ಣುಗಳನ್ನೇ ಜನ ಹೊತ್ತೊಯ್ದಿರುವ ಘಟನೆ ನಡೆದಿದೆ.ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅವಧ್ ಶಿಲ್ಪಗ್ರಾಮದಲ್ಲಿ, ಮಾವು ಮೇಳ ಆಯೋಜಿಸಲಾಗಿತ್ತು. ಮೂರು ದಿನಗಳಿಂದೆ ಆರಂಭವಾಗಿದ್ದ ಮೇಳಕ್ಕೆ ಸ್ವತಃ ಸಿಎಂ ಯೋಗಿ ಆದಿತ್ಯಾನಾಥ್ ಚಾಲನೆ ನೀಡಿದ್ದರು.
ಈ ವಿಶೇಷ ಮಾವುಮೇಳಕ್ಕೆ ಉತ್ತರ ಪ್ರದೇಶ ಮಾತ್ರವಲ್ಲದೇ ದೇಶದ ಮೂಲೆ ಮೂಲೆಗಳಿಂದಲೂ ಮಾವು ಬೆಳೆಗಾರರು ತಮ್ಮ ಮಾವುಗಳನ್ನು ತಂದಿದ್ದರು.ಈ ಪೈಕಿ ಪ್ರದರ್ಶನ ಕೇಂದ್ರದಲ್ಲಿ ಸುಮಾರು 80ಕ್ಕೂ ವಿವಿಧ ತಳಿಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಪ್ರದರ್ಶನದಲ್ಲಿ ನೂರಾರು ಟನ್ ಮಾವು ಮಾರಾಟ ಕೂಡ ಮಾಡಲಾಗಿತ್ತು. ಆದರೆ ಮಾವು ಮೇಳದ ಅಂತಿಮ ದಿನದಂದು ಯಾರೂ ಊಹಿಸಲಾಗದ ಘಟನೆ ನಡೆದಿದ್ದು ಮೇಳದ ಅಂತಿಮ ದಿನ ಯಥೇಚ್ಛ ಜನ ಮೇಳಕ್ಕೆ ಆಗಮಿಸಿದ್ದಾರೆ.
ಈ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಭದ್ರತಾ ಸಿಬ್ಬಂದಿ ಅವರನ್ನು ನಿರ್ವಹಿಸುವಾಗಲೇ ಪ್ರದರ್ಶನ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಮಾವಿನ ಹಣ್ಣುಗಳನ್ನು ಜನ ಹೊತ್ತೊಯ್ದಿದ್ದಾರೆ.
ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಕೈ ಸಿಕ್ಕ ಕವರ್, ಚೀಲಗಳನ್ನುಉಪಯೋಗಿಸಿಕೊಂಡು ಕೈಗೆ ಸಿಕ್ಕಷ್ಟು ಹಣ್ಣುಗಳನ್ನು ಚೀಲದೊಳಗೆ ತುಂಬಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಲಾತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಕಳೆದ 3 ದಿನಗಳಿಂದ ಯಾವುದೇ ತಡೆ ಇಲ್ಲದೇ ನಡೆದಿದ್ದ ಮಾವು ಮೇಳ ಅಂತಿಮ ದಿನದಂದು ವ್ಯಾಪಕ ಅಸ್ತವ್ಯಸ್ಥಕ್ಕೆ ಕಾರಣವಾಗಿತ್ತು. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡ ಕೆಲವರು ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಆರಂಭಿಸಿದರು. ಬಳಿಕ ಇಲ್ಲಿದ್ದ ಇತರರೂ ಕೂಡ ಅದೇ ಮಾರ್ಗವನ್ನು ಹಿಡಿದರು. ಜನರ ಈ ನಡೆ ಮಾವುಮೇಳದ ಆಯೋಜಕರನ್ನೇ ಬೆಚ್ಚಿ ಬೀಳಿಸಿದೆ.
[ad_2]
Source link