
ಧಾರವಾಡ: ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಡಿ ಕ್ರಿಯೇಷನ್ ನಿರ್ಮಾಣದ ದೂರ ತೀರ ಯಾನ ಸಿನಿಮಾದ ಪ್ರಿಮಿಯರ್ ಶೋವನ್ನು ಧಾರವಾಡದಲ್ಲಿ ಜುಲೈ 9ರಂದು ಆಯೋಜಿಸಲಾಗಿದ್ದು, ಇದಕ್ಕಾಗಿ ನಟಿ ಸೃತಿ ಹರಿಹರನ್ ಸೇರಿದಂತೆ ತಾರಾ ಬಳಗವೇ ಧಾರವಾಡಕ್ಕೆ ಆಗಮಿಸುತ್ತಿದೆ.

ದೇವರಾಜ್ ಆರ್ ನಿರ್ಮಾಣದ ಈ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ನಿರ್ದೇಶನ ಮಾಡಿದ್ದು, ಜುಲೈ 9ರಂದು ಸಂಜೆ 4ಕ್ಕೆ ಧಾರವಾಡದ ಪದ್ಮಾ ಚಿತ್ರಮಂದಿರದಲ್ಲಿ ಪ್ರಿಮಿಯರ್ ಶೋ ಪ್ರದರ್ಶನ ನಡೆಯಲಿದೆ.

ಈ ಪ್ರಿಮಿಯರ್ ಶೋಗೆ ಸಾರ್ವಜನಿಕರಿಗೆ ಉಚಿತ ಟಿಕೆಟ್ ಮೂಲಕ ಪ್ರವೇಶವಿದ್ದು, ಈಗಾಗಲೇ ಟಿಕೆಟ್ ಬುಕ್ ಮಾಡಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಸಹ ನೀಡಲಾಗಿದೆ.ಇನ್ನು ಈ ಪ್ರಿಮಿಯರ್ ಪ್ರದರ್ಶನಕ್ಕೆ ಚಿತ್ರದಲ್ಲಿ ನಟಿಸಿರುವ ನಟಿ ಶೃತಿ ಹರಿಹರನ್, ನಾಯಕ ವಿಜಯ ಕೃಷ್ಣ, ನಾಯಕಿ ಪ್ರಿಯಾಂಕ ಕುಮಾರ, ಕೃಷ್ಣ ಹೆಬ್ಬಾಳೆ, ಶೋಭರಾಜ್ ಪಾವೂರ

ಪಿ.ಡಿ. ಸತೀಶಚಂದ್ರ, ಚಿತ್ರದ ನಿರ್ಮಾಪಕ ದೇವರಾಜ್ ಆರ್. ನಿರ್ದೇಶಕ ಮಂಸೋರೆ ಸೇರಿದಂತೆ ಚಿತ್ರತಂಡದವರು ಪಾಲ್ಗೊಳ್ಳಲಿದ್ದಾರೆ..
