[ad_1]
ನವದೆಹಲಿ: ಇಂಗ್ಲೆಂಡ್ ವಿರುದ್ದ ಮುಂಬರುವ ಐದು ಪಂದ್ಯಗಳ ಸರಣಿಯಲ್ಲಿ (IND vs ENG) ಭಾರತ ತಂಡದ ಪ್ಲೇಯಿಂಗ್ XIನ ಮೂರನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ (Sai Sudarshan) ಆಡಬೇಕೆಂದು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ (Michael Clarke) ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿಯಿಂದ ತೆರವಾಗಿರುವ ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶುಭಮನ್ ಗಿಲ್ ಆಡಲಿದ್ದು, ಮೂರನೇ ಕ್ರಮಾಂಕಕ್ಕೆ ಸೂಕ್ತ ಆಟಗಾರ ಹುಡುಕಾಟದಲ್ಲಿ ಟೀಮ್ ಮ್ಯಾನೇಜ್ಮೆಂಟ್ ತೊಡಗಿದೆ. ಸಾಯಿ ಸುದರ್ಶನ್ ಜೊತೆಗೆ ಮೂರನೇ ಕ್ರಮಾಂಕದ ರೇಸ್ನಲ್ಲಿ ಕರುಣ್ ನಾಯರ್ ಕೂಡ ಇದ್ದಾರೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಗೆದ್ದು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಸಾಯಿ ಸುದರ್ಶನ್, ಭಾರತ ಟೆಸ್ಟ್ ತಂಡದ ಮೂರನೇ ಕ್ರಮಾಂಕಕ್ಕೆ ಸೂಕ್ತ ಆಟಗಾರ ಎಂಬ ಅಭಿಪ್ರಾಯವನ್ನು ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.
IND vs ENG: ಕನ್ನಡಿಗನನ್ನು ಕೈ ಬಿಟ್ಟು ಮೊದಲನೇ ಟೆಸ್ಟ್ಗೆ ಭಾರತದ ಪ್ಲೇಯಿಂಗ್ XI ಆರಿಸಿದ ಆಕಾಶ್ ಚೋಪ್ರಾ!
ಸಾಯಿ ಸುದರ್ಶನ್ ಸೂಪರ್ ಸ್ಟಾರ್ ಆಟಗಾರ: ಮೈಕಲ್ ಕ್ಲಾರ್ಕ್
“ನನ್ನ ದೃಷ್ಟಿಯಲ್ಲಿ ಸಾಯಿ ಸುದರ್ಶನ್ ನಿಜಕ್ಕೂ ಸೂಪರ್ ಸ್ಟಾರ್ ಆಟಗಾರ. ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಆಡುವ ಬ್ಯಾಟ್ಸ್ಮನ್ ಎಂಬ ನಂಬಿಕೆ ನನಗಿದೆ. ಅಲ್ಲದೆ ಏಕದಿನ ಹಾಗೂ ಟಿ200 ಸ್ವರೂಪದ ಭಾರತ ತಂಡಕ್ಕೆ ಉತ್ತಮ ಆರಂಭಿಕ ಬ್ಯಾಟ್ಸ್ಮನ್ ಆಗಲಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಖಂಡಿತವಾಗಿಯೂ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುತ್ತಾನೆ,” ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಸಾಯಿ ಸುದರ್ಶನ್ ಸ್ಟೈಲಿಶ್ ಆಟಗಾರ
“ಅವರು ಯಾವುದೇ ಅಂಜಿಕೆ ಇಲ್ಲದೆ ನೇರವಾಗಿ ಬಂದು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಅವರಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ಎಲ್ಲ ಹೊಡೆತಗಳ ನೈಪುಣ್ಯತೆ ಇದೆ. ಸಾಯಿ ಸುದರ್ಶನ್ ಸ್ಟೈಲಿಶ್ ಆಟಗಾರನಾಗಿದ್ದು, ಅವರ ಬ್ಯಾಟಿಂಗ್ ಪ್ರದರ್ಶನ ನನ್ನ ಗಮನವನ್ನು ಸೆಳೆದಿದೆ,” ಎಂದು ಮೈಕಲ್ ಕ್ಲಾರ್ಕ್ ತಿಳಿಸಿದ್ದಾರೆ.
IND vs ENG: ಕನ್ನಡಿಗ ಕರುಣ್ ನಾಯರ್ಗೆ ಚಾನ್ಸ್ ನೀಡುವ ಬಗ್ಗೆ ಗೌತಮ್ ಗಂಭೀರ್ ಸುಳಿವು!
ಆರೆಂಜ್ ಕ್ಯಾಪ್ ಗೆದ್ದಿದ್ದ ಸುದರ್ಶನ್
2025ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸಾಯಿ ಸುದರ್ಶನ್, 15 ಪಂದ್ಯಗಳಿಂದ 156.17ರ ಸ್ಟ್ರೆಕ್ ರೇಟ್ನಲ್ಲಿ ಒಂದು ಶತಕ ಹಾಗೂ 6 ಅರ್ಧಶತಕ ನೆರವಿನಿಂದ 759 ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಪ್ರಿಯಾಂಶ್ ಆರ್ಯ, ನೂರ್ ಅಹಮದ್ ಸೇರಿದಂತೆ ಹಲವಾರು ಯುವ ಆಟಗಾರರನ್ನು ಹಿಂದಿಕ್ಕಿ ಎಮರ್ಜಿಂಗ್ ಪ್ಲೇಯರ್ ಸೇರಿದಂತೆ ಹಲವು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇದೇ ವೇಳೆ ಇಂಗ್ಲೆಂಡ್ ‘ಎ’ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿರುವ ಕನ್ನಡಿಗ ಕರುಣ್ ನಾಯರ್ ಕೂಡ ಮೂರನೇ ಕ್ರಮಾಂಕದಲ್ಲಿ ಆಡುವ ಮೂಲಕ ಸುದೀರ್ಘ ಕಾಲದ ನಂತರ ಭಾರತ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಲೀಡ್ಸ್ನಲ್ಲಿ ಜೂನ್ 20 ರಂದು ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಹಾಗೂ ಸಾಯಿ ಸುದರ್ಶನ್ ಪೈಕಿ ಯಾರು ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕು.
[ad_2]
Source link