
ಧಾರವಾಡ: ಅನುಮಾನಾಸ್ಪದವಾಗಿ ರಾತ್ರಿಯ ವೇಳೆ ತಿರುಗಾಡುತ್ತಾ, ಒಂದೇ ಬೈಕ್ ನಲ್ಲಿ ಮೂರು ಮಂದಿ ಹತ್ತಿ ಓಡಾಡುವರು ರೌಡಿಶೀಟರ್ ಗಳು ಗಾಂಜಾ ಪೆಡ್ಲರುಗಳು, ಕಾನೂನು ಸುವ್ಯವಸ್ಥೆ ಹಾಳು ಮಾಡುವವರು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದವರು. ಇಂಥವರನ್ನ ಗುರುತಿಸಿ, ಧಾರವಾಡದ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಂತಹ ರೌಡಿಶಿಟರಗಳ ಮನೆಯ ಮೇಲೆ ಬೆಳಿಗ್ಗೆಯೇ ಪೊಲೀಸರು ದಾಳಿ ನಡೆಸಿ ಅಂತವರನ್ನು ಕರೆತಂದು ವಿಚಾರಿಸಿ, ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.ಧಾರವಾಡದ acp ಪ್ರಶಾಂತ್ ಸಿದ್ದನಗೌಡರ ಇವರ ನೇತೃತ್ವದ ತಂಡದವರು ಮತ್ತು ಎಲ್ಲಾ cpi.psi. ಮತ್ತು ಸಿಬ್ಬಂದಿಗಳು ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ರೌಡಿಶೀಟರ್ ಗಳನ್ನು ಹಾಲ್ ನಲ್ಲಿ ವಿಚಾರಣೆ ಮಾಡಿ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅಲ್ಲದೆ ಏನಾದರೂ ಕಾನೂನು ಬಾಹಿರದಲ್ಲಿ ತೊಡಗಿದ್ದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕೆಲವರನ್ನ ಗಡಿ ಪಾರು ಮಾಡಲಾಗಿದೆ. ಕೆಲವರನ್ನು ನಿಗಾದಲ್ಲಿ ಇಡಲಾಗಿದೆ. ಸುಧಾರಣೆಯಾಗುವವರಿಗೆ ಸುಧಾರಿಸುವ ಅವಕಾಶ ನೀಡಲಾಗುವುದು….ಹು- ಧಾರವಾಡ ಪೊಲೀಸ್ ಕಮಿಷನರ್ ಆದೇಶ ಮೇರೆಗೆ acp ಪ್ರಶಾಂತ್ ಸಿದ್ದನಗೌಡರು, Cpi ನಾಗೇಶ್ ಕಾಡದೇವರ ಮಠ, Cpi ಸಂಗಮೇಶ್ ದಿಡದನಾಳ, Cpi ದಯಾನಂದ್ ಶೇಗುಣಸಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ತೊಡಗಿದ್ದರು..
