[ad_1]
ಅಹಮದಾಬಾದ್: ಮಂಗಳವಾರ ನಡೆದಿದ್ದ ಐಪಿಎಲ್ ಫೈನಲ್(IPL Final 2025) ಪಂದ್ಯದಲ್ಲಿ ಆರ್ಸಿಬಿ ತಂಡ ಪಂಜಾಬ್ ಕಿಂಗ್ಸ್(RCB vs PBKS Final) ವಿರುದ್ಧ 6 ರನ್ ರೋಚಕ ಗೆಲುವಿನೊಂದಿಗೆ 18 ವರ್ಷಗಳ ಕಪ್ ಬರಗಾಲವನ್ನು ನೀಗಿಸಿಕೊಂಡಿತು. ಜತೆಗೆ ಅಭಿಮಾನಿ ದಂಪತಿಯ ವಿಚ್ಛೇದನವೊಂದನ್ನು(Female RCB Fan) ಕೂಡ ಆರ್ಸಿಬಿ ತಪ್ಪಿಸಿತು. ಕಪ್ ಗೆದ್ದ ಬಳಿಕ ಈ ಅಭಿಮಾನಿ ಈ ಸಲ ಕಪ್ ನಮ್ದೇ ಎಂದು ವಿಡಿಯೊ ಹಂಚಿಕೊಂಡಿದ್ದಾರೆ.
ಹೌದು, 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಮತ್ತು ಫೈನಲ್ಗೂ ಮುನ್ನ ಆರ್ಸಿಬಿಯ ಅಪ್ಪಟ ಮಹಿಳಾ ಅಭಿಮಾನಿಯಾದ ಚಿರಾಯ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ, ಆ ಬಳಿಕ ಕ್ವಾಲಿಫೈಯರ್ ಪಂದ್ಯದಲ್ಲಿ ಪೋಸ್ಟರ್ ಹಿಡಿಯುವ ಮೂಲಕ ಈ ಬಾರಿ ಆರ್ಸಿಬಿ ಕಪ್ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ ನೀಡುವುದಾಗಿ ಓಪನ್ ಚಾಲೆಂಜ್ ಹಾಕಿದ್ದರು. ಇದೀಗ ಆರ್ಸಿಬಿ ಕಪ್ ಗೆಲ್ಲುವ ಮೂಲಕ ಈ ಜೋಡಿ ಬೇರೆಯಾಗುದನ್ನು ತಪ್ಪಿಸಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಉತ್ತರ ಭಾರತದ ಆರ್ಸಿಬಿ ಅಭಿಮಾನಿಯಾಗಿರು ಚಿರಾಯ, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊ ಮಾಡಿ ‘ನಾನು ಭವಿಷ್ಯ ನುಡಿಯುತ್ತಿದ್ದೇನೆ. ಈ ಬಾರಿ ಆರ್ಸಿಬಿ ಫೈನಲ್ನಲ್ಲಿ ಗೆಲ್ಲದಿದ್ದರೆ, ನಾನು ನನ್ನ ಪತಿಗೆ ವಿಚ್ಛೇದನ ನೀಡುತ್ತೇನೆ . ಇದು ಯಾವುದೇ ಸ್ಕ್ರಿಪ್ಟೆಡ್ ವಿಡಿಯೊ ಅಲ್ಲ. ಈ ವಿಡಿಯೊವನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ಆರ್ಸಿಬಿ ಫೈನಲ್ ಗೆಲ್ಲದಿದ್ದರೆ, ನಾನು ನನ್ನ ಪತಿಗೆ 100 ಪ್ರತಿಶತ ವಿಚ್ಛೇದನ ನೀಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾನು ಸತ್ಯವನ್ನು ಹೇಳುತ್ತಿದ್ದೇನೆ’ ಎಂದು ಚಾಲೆಂಜ್ ಹಾಕಿದ್ದರು.
ಇಲ್ಲಿಗೆ ಸುಮ್ಮನಾಗದ ಈ ಅಭಿಮಾನಿ ಕಳೆದ ಆರ್ಸಿಬಿ ಮತ್ತು ಪಂಜಾಬ್ ನಡುವಣ ಕ್ವಾಲಿಫೈಯರ್-1ರ ಪಂದ್ಯಕ್ಕೂ ಆಗಮಿಸಿ, ಆರ್ಸಿಬಿ ಕಪ್ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ ನೀಡುತ್ತೇನೆ ಎಂದು ಪೋಸ್ಟರ್ ಹಿಡಿದಿದ್ದರು. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
⭐️ RCB PLAYED BOLD! 😇
17 Years, 6256 Days, 90,08,640 Minutes later, the wait finally ends. 🙌🤯
The IPL Trophy is finally coming home. And we CANT KEEP CALM! 🤩😍❤️ pic.twitter.com/lQvtLff9o2
— Royal Challengers Bengaluru (@RCBTweets) June 3, 2025
ಆರ್ಸಿಬಿ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ. ಮಕ್ಕಳು, ಯುವಕರು, ಗೃಹಿಣಿಯರು, ಮಧ್ಯವಯಸ್ಕರು, ಇಳಿ ವಯಸ್ಸಿನ ಅಭಿಮಾನಿಗಳೂ ಮನೆಯಿಂದ ಹೊರಗೆ ಬಂದು ಆರ್ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ದೇಶಾದ್ಯಂತ ಆರ್ಸಿಬಿಯ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಮಧ್ಯರಾತ್ರಿಯಲ್ಲಿಯೂ ಸಂಭ್ರಮಾಚರಣೆ ನಡೆಸಿದ್ದರು.
ಅತ್ಯಂತ ರೋಚಕ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 190 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 184 ರನ್ ಗಳಿಸಲಷ್ಟೇ ಶಕ್ತವಾಗಿ 6 ರನ್ ಅಂತರದಿಂದ ಸೋಲೊಪ್ಪಿಕೊಂಡಿತು.
[ad_2]
Source link