[ad_1]
ಲಕ್ನೋ: ಡೆಲ್ಲಿ ಕ್ಯಾಪಿಟಲ್ಸ್ ನಿಂದ ಬೇರ್ಪಟ್ಟ ರಿಷಭ್ ಪಂತ್(Rishabh Pant) ಕಳೆದ ಬಾರಿಯ ಐಪಿಎಲ್(IPL 2025) ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗಳ ಬೃಹತ್ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡಕ್ಕೆ ಮಾರಾಟವಾಗಿ ಐಪಿಎಲ್ ದಾಖಲೆಯನ್ನೆಲ್ಲ ಚಿಂದಿ ಮಾಡಿದ್ದರು. ಇದೀಗ ಅವರು ಲಕ್ನೋ ತಂಡದ ನಾಯಕನಾಗಲಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಲಕ್ನೋ ತಂಡದ ನಾಯಕನಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಈ ಬಾರಿ ಡೆಲ್ಲಿ ತಂಡ ಸೇರಿದ್ದಾರೆ. ಹೀಗಾಗಿ ಅವರಿಂದ ತೆರವಾದ ನಾಯಕ ಸ್ಥಾನಕ್ಕೆ ರಿಷಭ್ ಪಂತ್ ನೇಮಕಗೊಳ್ಳಲಿದ್ದಾರೆ ಎನ್ನಲಾಗಿದೆ. ಪಂತ್ ಲಕ್ನೋ ತಂಡ ಸೇರುವ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದರು. ಆರಂಭದಲ್ಲಿ ವಿಂಡೀಸ್ನ ನಿಕೋಲಸ್ ಪೂರನ್ ಲಕ್ನೋ ತಂಡದ ನಾಯಕನಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಫ್ರಾಂಚೈಸಿ ಪಂತ್ಗೆ ನಾಯಕತ್ವ ನೀಡುವ ಒಲವು ತೋರಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಕಳೆದ 17ನೇ ಆವೃತ್ತಿಯ ಐಪಿಎಲ್ನಲ್ಲಿ ಪಂತ್ ಸಾರಥ್ಯದಲ್ಲಿ ಡೆಲ್ಲಿ ತಂಡ ಆಡಿದ 14 ಪಂದ್ಯಗಳಲ್ಲಿ ತಲಾ 7 ಗೆಲುವು ಮತ್ತು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು. ಲಕ್ನೋ ತಂಡ 7ನೇ ಸ್ಥಾನಿಯಾಗಿತ್ತು.
ಇದನ್ನೂ ಓದಿ KMF Nandini IPL: ಐಪಿಎಲ್ ಪ್ರವೇಶಕ್ಕೆ ಮುಂದಾದ ‘ನಂದಿನಿ’; ಈ ತಂಡಕ್ಕೆ ಪ್ರಾಯೋಜಕತ್ವ ಸಾಧ್ಯತೆ
ಲಕ್ನೋ ತಂಡ
ನಿಕೋಲಸ್ ಪೂರನ್(21 ಕೋಟಿ), ಮಯಾಂಕ್ ಯಾದವ್(11 ಕೋಟಿ), ರವಿ ಬಿಷ್ಣೋಯ್(11 ಕೋಟಿ), ಮೊಹ್ಸಿನ್ ಖಾನ್(4ಕೋಟಿ), ಆಯುಷ್ ಬದೋನಿ(4 ಕೋಟಿ), ರಿಷಭ್ ಪಂತ್ (27 ಕೋಟಿ), ಆವೇಶ್ ಖಾನ್ (9.75 ಕೋಟಿ), ಡೇವಿಡ್ ಮಿಲ್ಲರ್ (7.50 ಕೋಟಿ), ಮಿಚೆಲ್ ಮಾರ್ಷ್ (3.40 ಕೋಟಿ), ಏಡನ್ ಮಾರ್ಕ್ರಮ್ (2 ಕೋಟಿ), ಅಬ್ದುಲ್ ಸಮದ್ (4.20 ಕೋಟಿ), ಆರ್ಯನ್ ಜುಯಲ್ (30 ಲಕ್ಷ). ಆಕಾಶ್ದೀಪ್ (8 ಕೋಟಿ), ಶಾಬಾಜ್ ಅಹ್ಮದ್ (2.40 ಕೋಟಿ), ಹಿಮ್ಮತ್ ಸಿಂಗ್ (30 ಲಕ್ಷ), ಎಂ. ಸಿದ್ಧಾರ್ಥ್ (75 ಲಕ್ಷ), ದಿಗ್ವೇಷ್ ಸಿಂಗ್ (30 ಲಕ್ಷ), ಆಕಾಶ್ ಸಿಂಗ್ (30 ಲಕ್ಷ), ಶಮರ್ ಜೋಸೆಫ್ (75 ಲಕ್ಷ), ಪ್ರಿನ್ಸ್ ಯಾದವ್ (30 ಲಕ್ಷ), ಯುವರಾಜ್ ಚೌಧರಿ (30 ಲಕ್ಷ), ರಾಜ್ಯವರ್ಧನ್ ಹಂಗರ್ಗೆಕರ್ (30 ಲಕ್ಷ), ಅರ್ಷಿನ್ ಕುಲಕರ್ಣಿ (30 ಲಕ್ಷ), ಮ್ಯಾಥ್ಯೂ ಬ್ರಿಟ್ಜ್ಕೆ (75 ಲಕ್ಷ).
[ad_2]
Source link