[ad_1]
ನವದೆಹಲಿ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಭಾರತದ ಗಡಿ ಪ್ರದೇಶಗಳಲ್ಲಿ ಡ್ರೋನ್, ಕ್ಷಿಪಣಿ ದಾಳಿ ನಡೆಸಿ ಪುಂಡಾಟ(India-Pak Tensions) ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತ ಮತ್ತೆ ಠಕ್ಕರ್ ನೀಡಿದೆ. ಪಾಕಿಸ್ತಾನದ ಎಲ್ಲಾ ವಿಫಲ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನದ ಮೇಲೆ ಡ್ರೋನ್ ದಾಳಿ(India Drone Strike on Pak) ನಡೆಸಿದೆ. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್ವರೆಗೆ ಭಾರತದ 26 ಸ್ಥಳಗಳಲ್ಲಿ ಪಾಕಿಸ್ತಾನ ಹೊಸ ಡ್ರೋನ್ ದಾಳಿಯನ್ನು ನಡೆಸಿದ ನಂತರ ಕೌಂಟರ್ ಅಟ್ಯಾಕ್ ಶುರು ಮಾಡಿದ ಭಾರತ, ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ ಮತ್ತು ಶೇಖುಪುರ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ.
ರಕ್ಷಣಾ ಮೂಲಗಳ ಪ್ರಕಾರ, ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ನಲ್ಲಿರುವ ಪಾಕಿಸ್ತಾನದ ವಾಯುಪಡೆ ನೆಲೆಯ ಮೇಲೂ ಭಾರತ ದಾಳಿ ಮಾಡಿದೆ. ಸಿಯಾಲ್ಕೋಟ್ ಮತ್ತು ನರೋವಾಲ್ನಲ್ಲಿರುವ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಅಟ್ಯಾಕ್ ಮುಂದುವರಿದಿದೆ. ಪಂಜಾಬ್ ರಾಜ್ಯವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಹಾರಿಸಿದ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭಾರತೀಯ ಪಡೆಗಳು ತಡೆದಿವೆ.
ಈ ಸುದ್ದಿಯನ್ನೂ ಓದಿ: Operation Sindoor: ಯಕ್ಷಗಾನದಲ್ಲೂ ಮಿಂಚಿದ ಆಪರೇಷನ್ ಸಿಂದೂರ; ಕಲಾವಿದರ ಸಂಭಾಷಣೆಯ ವಿಡಿಯೋ ವೈರಲ್!
[ad_2]
Source link