[ad_1]
ಕೊಚ್ಚಿ:
ಮಲಯಾಳಂ ನಟಿ ಹನಿ ರೋಸ್ ಸಲ್ಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಜೈಲಿನಿಂದ ಹೊರಬರಲು ನಿರಾಕರಿಸಿದ ಪ್ರಮುಖ ಉದ್ಯಮಿ ಬಾಬಿ ಚೆಮ್ಮನೂರು ಅವರನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬಾಬಿ ಚೆಮ್ಮನೂರು ವರ್ತನೆಯಿಂದ ಕೋಪಗೊಂಡ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್, ಹೈಕೋರ್ಟ್ ಜೊತೆ ಆಟವಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಜಾಮೀನು ನೀಡಿದರೆ ಅದನ್ನು ರದ್ದುಗೊಳಿಸಬಹುದು ಎಂದು ಹೇಳಿದರು.ಜಾಮೀನು ಪಡೆದ ನಂತರವೂ ಏಕೆ ಹೊರಬರಲಿಲ್ಲ ಎಂಬುದಕ್ಕೆ ಮಧ್ಯಾಹ್ನ 12 ಗಂಟೆಯೊಳಗೆ ವಿವರಣೆ ನೀಡುವಂತೆ ಹೈಕೋರ್ಟ್ ಚೆಮ್ಮನೂರು ಅವರನ್ನು ಕೇಳಿದೆ.
ನಿನ್ನೆ ಮಂಗಳವಾರ ಸಂಜೆ 4.08 ರೊಳಗೆ ಜಾಮೀನು ಆದೇಶವನ್ನು ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ ಸಂಜೆ 4.45 ರೊಳಗೆ ಬಿಡುಗಡೆ ಆದೇಶವನ್ನು ಹೊರಡಿಸಲಾಗಿದೆ ಎಂದು ಹೈಕೋರ್ಟ್ ಹೇಳಿತ್ತು. ಅದರ ನಂತರ ಅವರನ್ನು ಜೈಲಿನಲ್ಲಿ ಏಕೆ ಉಳಿಸಿಕೊಳ್ಳಲಾಯಿತು ಎಂದು ಅದು ಕೇಳಿದೆ.
[ad_2]
Source link