
ಕೋರ್ಟ ಆದೇಶದಂತೆ ನಾನು ಕೋರ್ಟಗೆ ಹಾಜರಾಗುತ್ತೆನೆ, ಜನಸಾಮಾನ್ಯರ ಕೆಲಸಗಳ ಆಗಬೇಕು ಎಂದು ನಿನ್ನೆ ಬೆಳಗಾವಿಯಲ್ಲಿ ಸಭೆ ಮಾಡಿದ್ದೆನೆ.ಕೋರ್ಟ ಆದೇಶದಂತೆ ನಾನು ನಡೆದುಕ್ಕೊಳ್ಳಬೇಕಾಗುತ್ತೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿಕೊಂಡಿದ್ದಾರೆ.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮುಂಗಾರು ಮಳೆ ಆಗುತ್ತಿದೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೆನೆ,ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಆಗಬೇಕು ಎಂದರು.

ನನಗೆ ಇವತ್ತು ಕಷ್ಠ ಬಂದಿದೆ ನನಗೆ ಬೇಲ್ ಕ್ಯಾನ್ಸಲ್ ಆಗಿದೆ, ನಾಳೆನೆ ಕೋರ್ಟಗೆ ಹಾಜರಾಗಬೇಕು.ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ನಾನು ಸದಾಸಿದ್ದನಿದ್ದೆನೆ. ವಿವಿಧ ಇಲಾಖಾವಾರು ಸಾಕಷ್ಟು ಕಾಮಗಾರಿಗಳನ್ನ ಕೋಟ್ಯಂತರ ಅನುದಾನದಲ್ಲಿ ಕೆಲಸ ಮಾಡಿದ್ದೆನೆ,ನನಗೆ ಸದ್ಯ ಹೆಲ್ಪಲೆಸ್ ಆಗಿದೆ.ರಾಜ್ಯದಲ್ಲಿ ಗ್ರಾಮೀಣ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ 28 ನೇಯ ಸ್ಥಾನ ಇತ್ತು, ಸದ್ಯ 6 ನೇಯ ಸ್ಥಾನಕ್ಕೆ ಬಂದಿದೆ ಎಂದರು.
ನಾನು ನನ್ನ ಪತ್ನಿಯ ಕರೆದುಕ್ಕೊಂಡು ಕೆಲಸ ಮಾಡಿದ್ದೆನೆ, ಮಾಧ್ಯಮದವರಿಗೆ ಮನವಿ ಮಾಡಿಕ್ಕೊಳ್ಳುತ್ತೆನೆ.ನಾನು ಕಷ್ಢದಲ್ಲಿ ಇದ್ದೆನೆ, ಸದ್ಯ ಅದನ್ನ ಮಾಧ್ಯದವರು ಅರ್ಥ ಮಾಡಿಕ್ಕೊಳ್ಳಬೇಕು.ನಾನು ಕ್ಷೇತ್ರದಲ್ಲಿ ಇಲ್ಲ ಅಂದರೂ ನನ್ನ ಪತ್ನಿ ಕೆಲಸ ಮಾಡಿಸಿದ್ದಾಳೆ.ರಾಜ್ಯದಲ್ಲಿ ನನ್ನ ಪ್ರಕರಣವನ್ನ ಎಲ್ಲರೂ ನೋಡುತ್ತಾರೆ ಎಂದು ಬಾವಕರಾದರು.
ಬೆಳಗಾವಿ ಸಭೆಯಲ್ಲಿ ಪತ್ನಿಯನ್ನ ಕೂಡಿಸಿಕ್ಕೊಂಡು ಸಭೆ ಮಾಡಿರುವ ವಿಚಾರವಾಗಿ ನಾನು ಇಲ್ಲದ ಸಮಯದಲ್ಲಿ ನನ್ನ ಪತ್ನಿ ಅಧಿಕಾರಿಗಳಿಂದ ಅಭಿವೃದ್ಧಿ ಕೆಲಸ ಮಾಡಿಸಿದ್ದಾಳೆ, ಮಾದ್ಯದವರು ಕಳಕಳ ಇರಲಿ, ಮಾಧ್ಯಮದವರೆ ಕೋರ್ಟ ತರಾ ಜಡ್ಜಮೆಂಟ್ ಕೊಡ್ತಾರೆ,ಯಾರದೋ ಒತ್ತಡಕ್ಕೆ ಮಣಿದು ನಮ್ಮ ಕುಟುಂಬದ ಬಗ್ಗೆ ತಪ್ಪಾಗಿ ತೋರಿಸಿಬೇಡಿ, ಕೋರ್ಟ ತೀರ್ಮಾಣ ಕ್ಕೆ ಬದ್ದನಿದ್ದೆನೆ. ಸಾಕ್ಷಿಗಳಿಗೆ ನಾನು ಯಾರಿಗೂ ಕಾಲ್ ಮಾಡಿಲ್ಲ, ಒತ್ತಡ ಹಾಕಿಲ್ಲ ನಾನು ಕಾಲ್ ಮಾಡಿದ್ರೆ ತೋರಿಸಲಿ ಎಂದರು.

ನಾಳೆ ಸಾಧ್ಯವಾದರೆ ಸಿಎಂ ಗೆ ಬೇಟಿ ಆಗುತ್ತೆನೆ, ನಾನು ಯಾವುದೆ ತಪ್ಪು ಮಾಡಿಲ್ಲ, ವಿನಯ ಕುಲಕರ್ಣಿ ಫಾಸ್ಟ ಆಗಿ ಬೆಳೆಯುತ್ತಿದ್ದಾನೆ. ಇದೆಲ್ಲ ಹುನ್ನಾರು ನಡಿತಾ ಇದೆ. ಕ್ಷೇತ್ರದ ಜನರು ನನ್ನ ಬೆಂಬಲಕ್ಕೆ ಇದ್ದಾರೆ, ನಾನು ಎಲ್ಲೋ ಕುಳಿತ್ರು ನನ್ನ ಆಯ್ಕೆ ಮಾಡಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ನಾನು ಯಾವಾಗಲೂ ರುಣಿಯಾಗಿದ್ದೆನೆ.ನಾನು ಲೈನಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ, ಡಬಲ್ ಗೇಮ್ ಆಡೋದು ನನಗೆ ಗೊತ್ತಿಲ್ಲ,ನಾನು ನೇರವಾಗಿ ಮಾತನಾಡುತ್ತೆನೆ.ನನಗೆ ದೆವರ ಮೆಲೆ ಭರವಸೆ ಇದೆ, ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತೆ ಎಂದ ವಿನಯ ಕುಲಕರ್ಣಿ ಪಕ್ಕದಲ್ಲಿ ಪತ್ನಿಯನ್ನ ಕೂಡಿಸಿಕ್ಕೊಂಡು ಮಾತನಾಡಿದರು.