[ad_1]
ಗಾಲೆ: ವಿದಾಯದ ಟೆಸ್ಟ್ ಪಂದ್ಯ ಆಡುತ್ತಿರುವ ಶ್ರೀಲಂಕಾದ ಹಿರಿಯ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್(Angelo Mathews) ಅವರಿಗೆ ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರು ವಿಶೇಷವಾಗಿ ಶುಭ ಹಾರೈಸಿದ್ದಾರೆ. ಮಂಗಳವಾರ(ಜೂ.17) ಆರಂಭ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮ್ಯಾಥ್ಯೂಸ್ಗೆ(Angelo Mathews test retirement ಲಂಕಾ ಪರ ಕೊನೆಯ ಟೆಸ್ಟ್ ಪಂದ್ಯವಾಗಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಮ್ಯಾಥ್ಯೂಸ್ ತಮ್ಮ ನಿವೃತ್ತಿ ಪ್ರಕಟಿಸಿದ್ದರು.
ಇನ್ಸ್ಟಾಗ್ರಾಮ್ ವಿಡಿಯೊ ಮೂಲಕ ಶುಭ ಹಾರೈಸಿದ ರೋಹಿತ್, “ಹೇ ಏಂಜಿ, ನಿಮ್ಮ ಅದ್ಭುತ ಟೆಸ್ಟ್ ವೃತ್ತಿಜೀವನಕ್ಕೆ ಅಭಿನಂದನೆಗಳು. ಬಾಂಗ್ಲಾ ವಿರುದ್ಧ ನಿಮ್ಮ ಕೊನೆಯ ಟೆಸ್ಟ್ ಪಂದ್ಯ. ನಾನು ನಿಮಗೆ ಮತ್ತು ತಂಡಕ್ಕೆ ಶುಭ ಹಾರೈಸುತ್ತೇನೆ. ಕಳೆದ ಕೆಲವು ವರ್ಷಗಳಿಂದ ನಾವು 19 ವರ್ಷದೊಳಗಿನ ದಿನಗಳಿಂದ ಇಲ್ಲಿಯವರೆಗೆ ನಿಜವಾಗಿಯೂ ಉತ್ತಮ ಹೋರಾಟಗಳನ್ನು ನಡೆಸಿದ್ದೇವೆ. ನೀವು ನಿಮ್ಮ ರಾಷ್ಟ್ರದ ನಿಜವಾದ ಸೇವಕರಾಗಿದ್ದೀರಿ, ನಿಮ್ಮ ದೇಶಕ್ಕಾಗಿ ನೀವು ಮಾಡಿದ್ದನ್ನು ತವರು ನೆಲದಲ್ಲಿರುವ ಪ್ರತಿಯೊಬ್ಬರೂ ಮೆಚ್ಚುತ್ತಾರೆ ಎಂದು ನನಗೆ ಖಚಿತವಾಗಿದೆ” ಎಂದು ರೋಹಿತ್ ಹಾರೈಸಿದ್ದಾರೆ.
“ನೀವು ಸಾಧಿಸಿದ್ದು ಬಹಳ ಜನರಿಂದ ಸಾಧಿಸಲಾಗದ ವಿಷಯ, ಆದ್ದರಿಂದ ಅದಕ್ಕಾಗಿ ಮತ್ತೊಮ್ಮೆ ಅಭಿನಂದನೆಗಳು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭ ಹಾರೈಸುತ್ತೇನೆ. ಸಂತೋಷದ ನಿವೃತ್ತಿ, ಅದನ್ನು ಆನಂದಿಸಿ, ಮತ್ತು ಇನ್ನೊಂದು ಬದಿಯಲ್ಲಿ ನಿಮ್ಮನ್ನು ನೋಡೋಣ, ಸಹೋದರ. ಶುಭವಾಗಲಿ,” ಎಂದು ರೋಹಿತ್ ಹೇಳಿದರು.
ಮ್ಯಾಥ್ಯೂಸ್ ಶ್ರೀಲಂಕಾ ಪರ ಇದುವರೆಗೆ 118 ಟೆಸ್ಟ್ ಪಂದ್ಯಗಳಿಂದ 44.62 ಸರಾಸರಿಯಲ್ಲಿ 8,167 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕಗಳು ಮತ್ತು 45 ಅರ್ಧಶತಕಗಳು ಸೇರಿವೆ. 2009 ರಲ್ಲಿ ಪಾಕಿಸ್ತಾನ ವಿರುದ್ಧ ಗಾಲೆಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. 16 ವರ್ಷಗಳ ವೃತ್ತಿಜೀವನದಲ್ಲಿ, ಅವರು ಶ್ರೀಲಂಕಾದ ಪರ ಟೆಸ್ಟ್ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕುಮಾರ್ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಮೊದಲಿಬ್ಬರು.
ಇದನ್ನೂ ಓದಿ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕನಾಗುವುದು ಅನುಮಾನ!
[ad_2]
Source link