
ಜೂ.19:* ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ ಸಿಇಓ ಅವರು ನೀಡಿದ್ದ ನಿರ್ದೇಶನದಂತೆ ವಿದ್ಯಾರ್ಥಿಗಳ ಸುರಕ್ಷತೆಗೆ ಗಮನಹರಿಸದೆ ಮತ್ತು ಕಾಲಮಿತಿಯಲ್ಲಿ ಶಾಲಾ ಕೊಠಡಿಗಳ ದುರಸ್ತಿಗೊಳಿಸದ ಹಿನ್ನಲೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಅವರು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಸೂಚನೆ ಮೇರೆಗೆ ಇಂದು ಬೆಳಿಗ್ಗೆ ಧಾರವಾಡ ತಾಲೂಕಿನ ಹೊನ್ನಾಪುರ, ಬೆಣಚಿ ಪ್ರೌಢಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಿದರು.

ಸಾರ್ವಜನಿಕ ದೂರು ಹಿನ್ನಲೆಯಲ್ಲಿ ಉತ್ತಮ ಕೊಠಡಿಗಳಿಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಗೊಳಿಸಿದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ನಿರ್ದೇಶನದಂತೆ ಬಿಇಓ ಅವರು ಹೊನ್ನಾಪುರ ಅನುದಾನಿತ ಪ್ರೌಢಶಾಲೆಗೆ ಭೇಟಿ ನೀಡಿ, ಕೊಠಡಿ ದುರಸ್ತಿ ಹಿನ್ನಲೆಯಲ್ಲಿ 9ನೇ ವರ್ಗದ ವಿದ್ಯಾರ್ಥಿಗಳಿಗೆ ಬೇರೆಡೆ ಪಾಠ ಮಾಡಲಾಗುತಿತ್ತು. ಇದನ್ನು ಗಮನಿಸಿದ ಅವರು ಮುಂದೆ ನಿಂತು ರಿಪೇರಿ ಆಗಿರುವ ಸುಸಜ್ಜಿತ ಕೊಠಡಿಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ, ಅಲ್ಲಿಯೇ ಮಕ್ಕಳಿಗೆ ಪಾಠ ಮಾಡುವಂತೆ ಮಾಡಿದರು.ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ಅನಾನುಕೂಲ ಮತ್ತು ಅಸುರಕ್ಷತೆ ಉಂಟಾದರೆ ಶಾಲೆಯ ಮೇಲೆ ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡಲಾಗುತ್ತದೆ.

ಹಿಂದಿನಿಂದ ಶಾಲೆಯನ್ನು ಸಂಸ್ಥೆಯವರು ಉತ್ತಮವಾಗಿ ನಿರ್ವಹಿಸಿದ್ದರೂ, ಉತ್ತಮ ಗುಣಮಟ್ಟದ ಮೂಲಸೌಕರ್ಯ ಕಲ್ಪಿಸುವಲ್ಲಿ ಕೊರತೆ ಉಂಟಾಗುತ್ತಿದೆ. ಈ ಕುರಿತು ತುರ್ತು ಕ್ರಮವಹಿಸಬೇಕೆಂದು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಿಗೆ ಅವರು ಸೂಚಿಸಿದರು. ಬೆಣಚಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತ ಭೇಟಿ: ಪೂರ್ವ ಪ್ರಾಥಮಿಕ ಶಾಲೆಯ ಎಲ್.ಕೆಜಿ, ಯುಕೆಜಿ ವರ್ಗಗಳನ್ನು ದುರಸ್ತಿ ಪೂರ್ಣಗೊಳ್ಳದ ಕೊಠಡಿಗಳಲ್ಲಿ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಿಇಓ ಸದಲಗಿ ಅವರು ಬೆಣಚಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಬೆಳಿಗ್ಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಿದರು.ಮಕ್ಕಳಿಗೆ ಬೇರೆಡೆ ಸ್ಥಳಾಂತರಿಸಿ, ಮುಂದಿನ ಎರಡು ದಿನದಲ್ಲಿ ಅನುμÁ್ಠನ ಏಜನ್ಸಿ ಕಾಮಗಾರಿ ಪೂರ್ಣಗೊಳಿಸಿ ಬಳಕೆಗೆ ನೀಡಬೇಕು ಎಂದು ತಿಳಿಸಿದರು.

ಕಟ್ಟಡ ಕಾಮಗಾರಿ ವಿಳಂಬ, ಅಪೂರ್ಣವಾದ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದ ಹಿನ್ನಲೆಯಲ್ಲಿ ಜಿ.ಪಂ. ಸಿಇಓ ಆದೇಶದ ಮೇರೆಗೆ ಶಾಲೆಯ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸುರೇಶ ಹಾಗೂ ಬೆಣಚಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗರಾಜ ಹಾಗೂ ಕೆ.ಆರ್.ಆಯ್.ಡಿ.ಎಲ್ ಎಇಇ ಅನ್ನಪೂರ್ಣ ಮತ್ತು ಶಿಕ್ಷಣ ಸಂಯೋಜಕ ಬಸವರಾಜ ಛಬ್ಬಿ ಉಪಸ್ಥಿತರಿದ್ದರು.