
ಧಾರವಾಡ: ನಕಲಿ ನೋಟು ಕೊಟ್ಟು ಪಂಗನಾಮ ಹಾಕಿದ್ದಾರೆ.ಪೇಪರ್ ಬಂಡಲ್ ಗಳನ್ನ ನೋಟುಗಳಂತೆ ಬ್ಯಾಗನಲ್ಲಿ ಕಟ್ಟಿ ತಂದು ವಂಚಕರು ಮೋಸ ಮಾಡಿದ್ದಾರೆ. ಹೌದು ಧಾರವಾಡ ನಗರದ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ನಡೆದ ಘಟನೆ ಇದಾಗಿದೆ.
ಜಮೀನು ವ್ಯವಹಾರ ಹಿನ್ನೆಲೆ ಧಾರವಾಡ ಉಪನೊಂದಣಾಧಿಕಾರಿ ಕಚೇರಿಗೆ ಬಂದಿದ್ದ ಎರಡು ಪಾರ್ಟಿಗಳು 2023, ರಲ್ಲಿ ಆರು ಏಕರೆ ಜಮೀನು ಖದೀರಿ ನೊಂದು ಮಾಡಿಸಿದ್ದರು. ಈಗ ಜಮೀನು ಮಾಲೀಕರು ಹಿಂದೆಟು ಹಾಕಿದ ಹಿನ್ನೆಲೆ ವ್ಯವಹಾರ ರದ್ದು ಆಗಿತ್ತು
ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ದಾನೇಶ್ವರಿ ಮುದ್ದಿ ಎಂಬುವವರಿಂದ ವಂಚನೆ ಆರೋಪವಾಗಿದ್ದು. ಜಮೀನು ಖರೀದಿ ಮಾಡಿದ್ದ ಸುರೇಶ, ಎಂಬ ಪುಡಕಲಕಟ್ಟಿ ಗ್ರಾಮಸ್ಥರಾಗಿದ್ದು, ಸುರೇಶ ತಡಕೋಡ ಮಾಜಿ ಯೋಧ, ಧರ್ಮೇಂದ್ರ ರಾಯನಗೌಡ್ರ, ಸುರೇಶ ಬಳಗೇರ ಎಂಬುವವರಿಗೆ ಸೇರಿದ್ದ ಜಮೀನುವಾಗಿದ್ದು.

ಉಪನೊಂದಣಾಧಿಕಾರಿ ಕಚೇರಿಗೆ ಬಂದಾಗ ಎರಡು ಪಾರ್ಟಿಗಳು ಅಸಲಿ ನೋಟು ಎಣಿಸಿದ್ದು, ಆದರೆ ನಂತರ ಬ್ಯಾಗ್ ಬದಲಾವಣೆ ಮಾಡಿದ್ದಾರೆ. ಬ್ಯಾಗ್ ಕಾರಿನಲ್ಲಿ ತಂದು ನೋಡಿದ ಮೇಲೆ ಮಾಜಿ ಯೋಧಪೇಪರ್ ಬಂಡಲ್ ನೋಡಿ ಶಾಕ್ ಆಗಿದ್ದಾರೆ. 19 ಲಕ್ಷ ಹಣ ವಂಚನೆ ಮಾಡಿದ್ದಾರೆ.ಪೇಪರ್ ಬಂಡಲ್ ಸುತ್ತಿ ಬ್ಯಾಗ್ ನಲ್ಲಿ ಇಟ್ಟು ಮೋಸ ಮಾಡಿದ್ದಾರೆ.
ಮಾಜಿ ಯೋಧ ಪೇಪರ್ ಬಂಡಲ್ ಕೊಟ್ಟು ಹೋದ ನಂತರ ಸ್ಥಳಕ್ಕೆ ಪೊಲೀಸರನ್ನ ಕರೆದಿದ್ದಾರೆ. ಈ ಘಟನೆ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..