
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಇವರು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯಗಳು ಸೈದಾಪುರ ಇಲ್ಲಿಗೆ ಭೇಟಿ ನೀಡಿದರು. ಭೇಟಿಯ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಕೊಡ ಮಾಡುವ ಸೌಲಭ್ಯಗಳ ಕುರಿತು ಮತ್ತು ಊಟ- ಉಪಹಾರದ ಕುರಿತು ಚರ್ಚಿಸಿದರು.ವಿದ್ಯಾರ್ಥಿಗಳೊಂದಿಗೆ ವಿದ್ಯಾಭ್ಯಾಸದ ಕುರಿತು ಚರ್ಚಿಸಿದರು. ಸ್ಪರ್ಧಾತ್ಮಕ ಪರೀಕ್ಷೆ ಗಳ ಕುರಿತು ವಿವರವಾಗಿ ಮಾರ್ಗದರ್ಶನ ನೀಡಿದರು.ವಿದ್ಯಾರ್ಥಿಗಳು ಸೌಲಭ್ಯಗಳನ್ನು ಪಡೆದುಕೊಂಡು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ತಿಳಿಸಿದರು. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಮತ್ತು ಮುಲಭೂತ ಸೌಲಭ್ಯಗಳನ್ನು ಕೊಡಮಾಡುವುದಾಗಿ ತಿಳಿಸಿದರು.
