ಧಾರವಾಡ: ಮೋರಂ ಹಬ್ಬ ಇಂದು ನಾಡಿನದ್ಯಾಂತ ಆಚರಣೆ ಮಾಡಲಾಯಿತು. ಅದರಂತೆ ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿ ಮೋರಂ ತುಂಬಾ ವಿಶೇಷವಾಗಿ ಆಚರಣೆ ಮಾಡಿದ್ದಾರೆ.ಹಿಂದು ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ತುಂಬಾ ಅದ್ದೂರಿಯಾಗಿ ಗ್ರಾಮದ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಸಿದರು. ಈ ಮೋರಂ ಹಬ್ಬ ನಿಗದಿ ಊರಿನಲ್ಲಿ ಎಲ್ಲಾ ಹಿಂದೂ ಧರ್ಮದವರೇ ಆಚರಣೆ ಮಾಡುತ್ತಾ ಬಂದಿದ್ದಾರೆ. ಈ ವರ್ಷ ಹೊಸ ದೇವರ ಮೂರ್ತಿಯನ್ನು ತರುವ ಮೂಲಕ ಹೊಸತನದಿಂದ ಆಚರಣೆ ನಡೆಸಿದ್ದಾರೆ.ದೇವರ ಮೆರವಣಿಗೆ ಉದ್ದಕ್ಕೂ ಡೋಳ್ಳಿನ ವ್ಯಾದ್ಯಗಳ ಮೂಲಕ ಮೆರವಣಿಗೆ ನಡಿಸಿ ಹಿಂದೂ ಮುಸ್ಲಿಂ ಸಮುದಾಯ ಭಾವೈಕ್ಯತೆಯಿಂದ ಕೋಡಿದ್ದವೆ ಎಂದು ನಾಡಿನ ಜನತೆ ತೋರಿಸಿದ್ದಾರೆ…
