[ad_1]
ತುಮಕೂರು:-
ತುಮಕೂರು ವಿಶ್ವವಿದ್ಯಾನಿಲಯವು ತನ್ನ 18ನೇ ಘಟಿಕೋತ್ಸವದಲ್ಲಿ ಪ್ರಜಾಪ್ರಗತಿ ಪತ್ರಿಕೆ ಮತ್ತು ಪ್ರಗತಿ ಟಿ.ವಿ. ಸಂಪಾದಕರಾಗಿರುವ ಎಸ್. ನಾಗಣ್ಣ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ.
ಇದೇ ಜುಲೈ 8 ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ಎಸ್. ನಾಗಣ್ಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಈ ಖುಷಿಯ ಹೊತ್ತಲ್ಲಿ ಎಸ್. ನಾಗಣ್ಣ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದಕ್ಕೆ ಜಿಲ್ಲೆ ಸೇರಿ ನಾಡಿನಾದ್ಯಂತ ಮೆಚ್ಚುಗೆ ಹಾಗೂ ಅಭಿನಂದನಾ ಮಹಾಪೂರವೇ ಹರಿದು ಬರುತ್ತಿದೆ.
ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಮಾತನಾಡಿ, ಹಿರಿಯ ಸಂಪಾದಕರು, ಪ್ರಜಾಪ್ರಗತಿಯನ್ನ ಬೆಂಗಳೂರು ಮತ್ತು ತುಮಕೂರಿನಲ್ಲಿ ಬೆಳಸಿ ಪ್ರಚಲಿತ ಸಮಸ್ಯೆಗಳಿಗೆ ಹೆಚ್ಚು ಒತ್ತನ್ನು ಕೊಟ್ಟಿದ್ದಾರೆ. ಪತ್ರಿಕೋದ್ಯಮದ ಸಾಧನೆ ಜೊತೆ ಸಮಾಜ ಸೇವೆಯಲ್ಲಿಯೂ ಹೆಸರುವಾಸಿಯಾಗಿರುವ ಎಸ್. ನಾಗಣ್ಣ ಅವರಿಗೆ ತುಮಕೂರು ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ಕೊಟ್ಟಿದೆ. ಭಗವಂತ ಅವರಿಗೆ ಒಳ್ಳೆಯದು ಮಾಡಲಿ. ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಸಂತೋಷದ ಸಂಗತಿ. ಅವರಿನ್ನೂ ನೂರು ಕಾಲ ಬಾಳಲಿ ಎಂದು ಶುಭ ಹಾರೈಸಿದ್ದಾರೆ.
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಪ್ರಭಾಕರ್ ಮಾತನಾಡಿ, ನನ್ನಂತಹ ಹಲವಾರು ಪರ್ತಕರ್ತರಿಗೆ ನಾಗಣ್ಣನವರು ಮಾರ್ಗದರ್ಶಕರಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಪತ್ರಿಕೋದ್ಯಮವನ್ನ ಕಟ್ಟಿ ಬೆಳೆಸಿದಂತಹ ಒಬ್ಬ ಹಿರಿಯ ಪರ್ತಕರ್ತರು ನಾಗಣ್ಣ ಅವರು
ಹಲವಾರು ಜನ ಪತ್ರಕರ್ತರಿಗೆ ಇವತ್ತು ದಾರಿದೀಪವಾಗಿದ್ದಾರೆ, ತಮ್ಮ ಬದುಕನ್ನ ಕಟ್ಟಿಕೊಳ್ಳೋದಕ್ಕೆ ಅವಕಾಶ ಕೊಟ್ಟಿದ್ದಾರೆ. ಒಬ್ಬ ಪತ್ರಕರ್ತ ಹೇಗಿರಬೇಕು. ಪತ್ರಿಕೋದ್ಯಮ ಯಾವ ರೀತಿ ಇರಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಪ್ರಜಾಪ್ರಗತಿ ಎಂಬ ಪತ್ರಿಕೆಯನ್ನ ಕಟ್ಟಿ ನಾಡಿನಾದ್ಯಂತ ಬೆಳೆಸಿದಂತಹ ಹಿರಿಯ ಪತ್ರಕರ್ತ ನಾಗಣ್ಣರವರಿಗೆ ಡಾಕ್ಟರೇಟ್ ಪದವಿಗೆ ಪಾತ್ರರಾಗುತ್ತಿರುವುದು ಅತ್ಯಂತ ಖುಷಿಯ ವಿಚಾರ. ಜೊತೆಗೆ ಪ್ರಗತಿ ಟಿ.ವಿಯನ್ನ ಸಹ ಪ್ರಾರಂಭಿಸಿ ಮತ್ತು ಕೇವಲ ಪತ್ರಿಕೋದ್ಯಮವಲ್ಲ ಹಲವಾರು ಸಮಾಜಮುಖಿ ಕೆಲಸಗಳು, ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಸಹ ಸಮಾಜಮುಖಿ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಅಂತ ಹಾರೈಸುತ್ತೇನೆ ಎಂದರು
ತುಮಕುರು ವಿಶ್ವವಿದ್ಯಾನಿಲಯ ಮೊನ್ನೆಯಷ್ಟೆ ಗೌರವ ಡಾಕ್ಟರೇಟ್ ಅನ್ನು ಪ್ರಕಟಪಡಿಸಿದೆ. ಬಹಳ ಸಂತೋಷವೆಂದರೆ ಈ ಭಾರಿ ನಮ್ಮ ವೈಸ್ ಚ್ಯಾನ್ಸೆಲರ್ ಮಾಡಿದಂತಹ ಕಮಿಟಿ, ಅತ್ಯುತ್ತಮರನ್ನ ಆಯ್ಕೆ ಮಾಡಿದೆ. ಅದರಲ್ಲಿ ಪ್ರಮುಖವಾಗಿ ಹಂಪ ನಾಗರಜಯ್ಯರವರು, ಅವರಿಗೆ ಡಾಕ್ಟರೇಟ್ ಬಂದಿರುವುದು ಸಂತೋಷವನ್ನ ತಂದಿದೆ. ಹಾಗೆ ಉದ್ಯಮ ಕ್ಷೇತ್ರದಲ್ಲಿ ದಿಲೀಪ್ ಸುರಾನ, ತಂದೆಯಿಂದ ಇಲ್ಲಿಯವರೆಗೆ ಉತ್ತಮ ಸೇವೆಯನ್ನ ಸಲ್ಲಿಸಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ ಪಟ್ಟಾ ಶಿಷ್ಯರಾದಂತಹ ಶ್ರೀಯುತ ನಾಗಣ್ಣರವರಿಗೆ ದೊರೆಕಿರುವುದು ನಮ್ಮೆಲ್ಲರಿಗೂ ಸಹ ತುಂಬೆ ನಾಡಿಗೆ ಹರುಷ ಉಂಟುಮಾಡುತ್ತಿರುವುದು.
ಏನಕ್ಕೆ ಅಂದರೆ 1980ರಲ್ಲಿ ಅವರು ಮುದ್ರಣ ಕ್ಷೇತ್ರಕ್ಕೆ ಬಂದು, ಇಲ್ಲಿಯ ವರೆಗೆ ಅವರು ಬೆಳೆದುನಿಂತರುವ ಹಾದಿಯಿದೆಯಲ್ಲಿ ಅದು ಅಷ್ಟು ಸುಗಮವಾದ ಹಾದಿಯಾಗಿರಲಿಲ್ಲ. ಬಹಳ ಕಷ್ಟಗಳನ್ನ ಅನುಭವಿಸಿ ಆ ಆ ಕಾಲದಲ್ಲಿ ಅಕ್ಷರ ಜೋಡಣೆಯನ್ನ ಮಾಡಿ ಈ ದಿನ ಅವರು ನಮ್ಮದೇ ಆದಂತಹ ನಮ್ಮ ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಅನ್ನ ಪಡೆದಿರುವುದು ನಮ್ಮೆಲ್ಲರಿಗೂ ಕೂಡ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಹಾಗಾಗಿ ನನ್ನ ಇಡೀ ಉಪನ್ಯಾಸಕ ಸಮುದಾಯದ ಪರವಾಗಿ ಮತ್ತು ಎಲ್ಲಾ ತುಮಕೂರು ನಾಗರಿಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಅರ್ಪಿಸುತ್ತೇನೆ ಎಂದು ನಿವೃತ್ತ ಪ್ರಾಂಶುಪಾಲರಾದ ಲೀಲಾವತಿ ಹೇಳಿದ್ದಾರೆ.
[ad_2]
Source link