[ad_1]
ಕೊರಟಗೆರೆ
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಗಂಡನನ್ನ ಪ್ರೇಮಿಯ ಜೊತೆ ಸೇರಿ ಹೆಂಡತಿ ಕೊಲೆ ಮಾಡಿಸಿದ ಪ್ರಕರಣ ಮೂರು ವರ್ಷದ ಮಗಳ ಹೇಳಿಕೆ ಅನ್ವಯಿಸಿ ತುಮಕೂರಿನ ಮೂರನೇ ಅಧಿಕ ಸತ್ರ ನ್ಯಾಯಾಲಯ ಆರೋಪಿಗಳಾದ ಹೆಂಡತಿ ಹಾಗೂ ಪ್ರೇಮಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೊರಟಗೆರೆ ತಾಲೂಕಿನ ಗಡಿಭಾಗ ಮಧುಗಿರಿ ತಾಲೂಕಿನ ಕೊಡಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರಗಿದ್ದು, ಯಶೋಧ ಎಂಬ ಮಹಿಳೆ ಪ್ರೇಮಿಯ ಜೊತೆ ಸೇರಿ ತಮ್ಮ ಗಂಡ ಅಂಜನಪ್ಪ ಎಂಬುವರನ್ನು ಕೊಲೆಗೈದ ಪ್ರಕರಣ ಆರು ವರ್ಷಗಳ ನಂತರ ತೀರ್ಪು ಹೊರಬಿದ್ದು , ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಮಧುಗಿರಿ ತಾಲೂಕು ಕೊಡಗೇನಹಳ್ಳಿ ಹೋಬಳಿ ಭಟ್ಟಗೆರೆ ಗ್ರಾಮದ ಅಂಜಿನಪ್ಪ ಹಾಗೂ ಯಶೋಧ ಎಂಬ ದಂಪತಿಗಳ ನಡುವೆ ಸಾಮರಸ್ಯ ಕೊರತೆ ಸೇರಿದಂತೆ ಹೆಂಡತಿ ಪ್ರೇಮಿಯೊಟ್ಟಿಗೆ ಸತತವಾಗಿ ಸಂಪರ್ಕ ಇಟ್ಟುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಸಾಂಸಾರಿಕ ಜೀವನದಲ್ಲಿ ಪ್ರತಿದಿನ ಗಲಾಟೆ ಗದ್ದಲದ ನಡುವೆ ಅಂತಿಮವಾಗಿ ಹೆಂಡತಿ ಯಶೋಧ ತನ್ನ ಪ್ರೇಮಿ ಮಂಜುನಾಥ್ ಜೊತೆಗೂಡಿ ಕೊಲೆಗೈದ ಪ್ರಕರಣ 6 ವರ್ಷಗಳ ಕಾಲ ಸತತ ತುಮಕೂರಿನ 3ನೇ ಅಧಿಕ ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ ಅಂತಿಮವಾಗಿ ಹೆಂಡತಿ ಹಾಗೂ ಪ್ರೇಮಿಗೆ ಜೀವಾವಧಿ ಶಿಕ್ಷೆ ನೀಡಿ ಅಂತಿಮ ತೀರ್ಪು ಹೊರಬಿದ್ದಿದೆ.
ಆರೋಪಿ ಯಶೋಧ ಪ್ರೇಮಿ ಮಂಜುನಾಥ್ ಸೇರಿ ಗಂಡ ಅಂಜನಪ್ಪ ನನ್ನ ಕೊಲೆ ಮಾಡಲೇಬೇಕು ಎಂದು ಗಂಡ ಅಂಜನಪ್ಪನಿಗೆ ಅಂದಿನ ರಾತ್ರಿ ಹೆಚ್ಚು ಮಧ್ಯ ಕುಡಿಸಿ ಜ್ಞಾನತಪಿ ಬೀಳುವಂತೆ ಮಾಡಿ ರಾತ್ರಿ ವೇಳೆ ಅಥವಾ ಮಲಗಿದ್ದ ತೋಟದ ಮನೆಯಲ್ಲಿ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಪ್ರಕರಣ ಅಂದಿನ ಸಿಪಿಐ ಅಂಬರೀಶ್ ಹೆಂಡತಿ ಮೇಲೆ ಅನುಮಾನಗೊಂಡು ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಿ ತಪ್ಪು ಒಪ್ಪಿಕೊಂಡು ತಲೆಮರೆಸಿಕೊಂಡಿದ್ದ ಪ್ರೇಯಸಿ ಮಂಜುನಾಥನನ್ನು ಪೊಲೀಸರು ಪ್ರಕರಣ ನಡೆದ ಎರಡು ದಿನದಲ್ಲಿ ಎಡೆಮುರಿ ಕಟ್ಟಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಅಂತಿಮ ಪಟ್ಟಿ ಸಲ್ಲಿಸಿದ್ದರು ಏನಾಗಿದೆ.
ಸಾಕ್ಷಿ ನುಡಿದ 3 ವರ್ಷದ ಮಗು
ಕೊನೆ ಪ್ರಕರಣ ಅಂತಿಮವಾಗಿ ಮೂರು ವರ್ಷದ ಮಗಳು ಜಾನಶ್ರೀ ನುಡಿದ ಸಾಕ್ಷಿ ಆಧಾರವಾಗಿಟ್ಟುಕೊಂಡು ಅಂದಿನ ಡಿ ವೈ ಎಸ್ ಪಿ ಕಲ್ಲೇಶಪ್ಪ ಮಾರ್ಗದರ್ಶನದಂತೆ ಸಿಪಿಐ ಅಂಬರೀಶ್ ಆರೋಪಿಗಳನ್ನ ಸತತವಾಗಿ ವಿಚಾರಣೆ ಗೊಳಿಸಿದ್ದಲ್ಲದೆ ಘಟನೆ ಮಧ್ಯರಾತ್ರಿ 3:00ಗೆ ಜರುಗಿದ ಹಿನ್ನೆಲೆಯಲ್ಲಿ ಸಾಕ್ಷಿ ಆಧಾರಗಳ ಕೊರತೆಯಿಂದ ಅಂತಿಮವಾಗಿ 3 ವರ್ಷದ ಮಗಳು ಜಾನುಶ್ರೀ ಅವರನ್ನ ಸಾಕ್ಷಿ ನುಡಿದ ಹಿನ್ನೆಲೆಯಲ್ಲಿ ಆರೋಪಿಗಳನ್ನ ಮಧ್ಯರಾತ್ರಿಯಲ್ಲಿ ಮಾತನಾಡುತ್ತಿರುವುದು ಹೊಂಚು ಹಾಕುತ್ತಿರುವುದನ್ನು ಕಂಡ ಮಗು ಭಯಗೊಂಡು ಘಟನೆಯ ಪೂರ್ಣ ಸಾಕ್ಷಿ ನುಡಿದ ಹಿನ್ನೆಲೆಯಲ್ಲಿ ಮೂರು ವರ್ಷದ ಮಗುವನ್ನೇ ಅಂತಿಮ ಸಾಕ್ಷಿಯನ್ನಾಗಿಸಿಕೊಂಡು ಚಾರ್ ಶೀಟ್ ಸಲ್ಲಿಸಿದ ಅಂದಿನ ಸಿಪಿಐ ಅಂಬರೀಶ್ ಕೂಲಂಕುಶವಾಗಿ ಅಂತಿಮ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಿದೆ ಎನ್ನಲಾಗಿದೆ.
ಯಾಮಾರಿಸಿದ ಮಾರೋಪಿಗಳನ್ನು ಎಡೆಮುರಿ ಕಟ್ಟಿದ ಪೊಲೀಸ್
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಹೆಂಡತಿ ಯಶೋಧ ಗಂಡ ನನ್ನ ಪ್ರೇಮಿಯ ಜೊತೆಗೂಡಿ ಕೊಲೆ ಮಾಡಿ ಕೊನೆಗೂ ಆರೋಪಿಗೂ ಸಂಬಂಧವೇ ಇಲ್ಲ ಎಂಬುವ ರೀತಿಯಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಅಂತ್ಯಕ್ರಿಯೆ ನಡೆಸಿದ ಕೆಲವೇ ದಿನಗಳಲ್ಲಿ ಅಂದಿನ ಪಿಎಸ್ಐ ಅಂಬರೀಶ್ ವಿಚಾರಣೆ ನಡೆಸಿ ಹೆಂಡತಿ ಯಶೋಧಾಳನ್ನ ಸತತ ವಿಚಾರಣೆ ನಡೆಸಿದ ಬಳಿಕ ಸತ್ಯ ಸತ್ಯಗಳು ಹೊರಬಿದ್ದು ಪ್ರೇಮಿ ಮಂಜುನಾಥ್ ಅವರನ್ನು ಎರಡು ದಿನಗಳ ಬಳಿಕ ಆರೋಪಿಯನ್ನ ಎಡಮುರಿ ಕಟ್ಟಿ ಮಗಳು ಜಾನುಶ್ರೀ ನುಡಿದ ಸತ್ಯ ನುಡಿಗಳನ್ನು ಆಧರಿಸಿ ಮಗಳನ್ನೇ ಸಾಕ್ಷಿ ಆದರಿಸಿ ದೂರು ದಾಖಲಿಸಿದ ಪಿಎಸ್ಐ ಅಂಬರೀಶ್ ಡಿವೈಎಸ್ಪಿ ಕಲ್ಲೇಶಪ್ಪ ಮಾರ್ಗದರ್ಶನದಲ್ಲಿ ಅಂತಿಮ ವರದಿ ಆರೋಪಿಗಳ ಜೀವಾವಧಿ ಶಿಕ್ಷೆಗೆ ಸತ್ಯಾಸತ್ಯತೆಗಳ ಕುಲಂಕುಶ ವರದಿ ಎತ್ತಿ ಹಿಡಿದಿದೆ ಎನ್ನಲಾಗಿದೆ.
[ad_2]
Source link