
ಧಾರವಾಡ: “ಲಕ್ಷ್ಯ”ಚಿತ್ರ ಭರ್ಜರಿ ಹಾಡುಗಳನ್ನು ಒಳಗೊಂಡಿರುವ ಚಿತ್ರವಾಗಿದೆ, 1990,ದಶಕದ ಉತ್ತರ ಕರ್ನಾಟಕದ ನೈಜ ಘಟನೆ ಆದರ್ಶಿಸಿ ತೆಗೆದರು ಲಕ್ಷ್ಯ ಚಿತ್ರ ನಾಳೆ ತೆರೆ ಮೇಲೆ ಬರಲು ಭರ್ಜರಿಯಾಗಿ ಸಜ್ಜಾಗಿದೆ.ಹಿತೇಶ ಹಿರೇಮಠ ನಟನೆಯ ಲಕ್ಷ್ಯ ಚಿತ್ರ ನಾಳೆ ಧಾರವಾಡದ ಐನಾಕ್ಸ್ ಚಿತ್ರಮಂದಿರದಲ್ಲಿ ಬರಲು ಅದ್ದೂರಿಯಾಗಿ ತಯರಾಗಿದೆ. ಅರ್ಜುನ ಪಿ, ಚಿತ್ರಕಥೆ, ಮತ್ತು ನಿರ್ದೇಶನ ಮಾಡಿದ್ದಾರೆ.ಈ ಲಕ್ಷ್ಯ ಚಿತ್ರ ಸಂಪೂರ್ಣ ಉತ್ತರ ಕರ್ನಾಟಕ ಭಾಗದಲ್ಲಿಯೇ ಚಿತ್ರೀಕರಿಸಲಾಗಿದ್ದು. ವಿಶೇಷವಾಗಿ ಧಾರವಾಡದ ಅನೇಕ ಪ್ರತಿಭಾವಂತ ಯುವಕರೇ ಈ ಚಿತ್ರದಲ್ಲಿ ಕಲಾವಿದರಾಗಿದ್ದಾರೆ.

ಧಾರವಾಡದ ಅನೇಕ ಶಾಲಾ ಕಾಲೇಜಿನ ಮುಖ್ಯಸ್ಥರಿಂದ ಪ್ರಶಂಶೆ ಪಡೆದ ಈ ಚಿತ್ರ ಕರ್ನಾಟಕದ್ಯಂತ ದಿನಾಂಕ :11/7/2025 ರಂದು ಬಿಡುಗಡೆಯಗುತ್ತದೆ.
ಧಾರವಾಡದ ಐನಾಕ್ಸ್ ಹಾಗೂ ಹುಬ್ಬಳ್ಳಿಯ ರೂಪಮ್ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಗೊಳ್ಳುತ್ತಿರುವದಾಗಿ ನಿರ್ದೇಶಕ ಅರ್ಜುನ್ ಡೊನೂರ ಅವರು ಚಿತ್ರ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.ಉತ್ತರ ಕರ್ನಾಟಕದ ಚಿತ್ರವಾಗಿರಬಹುದು ಕಲಾವಿದರು ಆಗಿರಬಹುದು ದೊಡ್ಡ ಮಟ್ಟಿಗೆ ಬೆಳೆಬೇಕು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಲಿ ಎಂದು ಉತ್ತರ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಶಂಕರ ಸುಗತೆ ಲಕ್ಷ್ಯ ಚಿತ್ರಕ್ಕೆ ಶುಭ ಹಾರೈಸಿದ್ದಾರೆ…ಶ್ರೀ ನಿಧಿ ನ್ಯೂಸ್ ಧಾರವಾಡ…
