
ಧಾರವಾಡ: ಯೂರಿಯಾ ಗೊಬ್ಬರಕ್ಕೆ ಧಾರವಾಡದ ರೈತರು ಅಲೆದಾಡುತ್ತಿರುವ ಪ್ರಸಂಗ ಎದುರಾಗಿದೆ. ಕಳೆದ 15 ದಿನಗಳಿಂದ ಯೂರಿಯಾ ಗೊಬ್ಬರಕ್ಕಾಗಿ ರೈತರ ಅಲೆದಾಟ ಹೆಚ್ಚಾಗಿದೆ…ಸೋಸೈಟಿಗಳ ಮುಂದೆ ನಿಂತು ಅನ್ನದಾತರು ಸರಕಾರಕ್ಕೆ ಚೀಮಾರಿ ಹಾಕುತಿದ್ದಾರೆ, ಧಾರವಾಡ ಜಿಲ್ಲೆಯಲ್ಲಿ ಎಲ್ಲೂ ಯೂರಿಯಾ ಗೊಬ್ಬರ ಸಿಗ್ತಿಲ್ಲ, ಮುಂಗಾರು ಬೆಳೆಗೆ ಅವಶ್ಯಕತೆ ಇರುವ ಬೇಕಾದ ಯೂರಿಯಾ ಗೊಬ್ಬರ ಸಿಗುತ್ತಿಲ್ಲ ರೈತರು ಗೋಳಾಡುತ್ತಿದ್ದಾರೆ.
ಯೂರಿಯಾ ಗೊಬ್ಬರ ಮಕ್ಕೆಜೋಳ್, ವಠಾಣಿ, ಆಲೂಗಡ್ಡೆ, ಕಬ್ಬು ಸೇರಿದಂತೆ ಇತರೆ ಬೆಳೆಗೆ ಸಧ್ಯ ಅತ್ಯಾವಶ್ಯಕವಾಗಿದೆ.ಅಲ್ಲೊಂದು ಇಲ್ಲೊಂದು ಯೂರಿಯಾ ಗೊಬ್ಬರದ ಚಿಲ ಸಿಕ್ರೆ ಅದನ್ನೂ ಸೋಸೈಟಿ ಅವರು ಬೇರೆ ಗೊಬ್ಬರಕ್ಕೆ ಲಿಂಕ್ ಮಾಡಿ ಕೊಡುತ್ತಿದ್ದಾರೆ. ಇನ್ನು ಅಧಿಕಾರಿಗಳು ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಗೊಬ್ಬರ ನೀಡುತ್ತಿದ್ದಾರೆ. ಆದರೆ ನ್ಯಾನೋ ಯೂರಿಯಾ ಗೊಬ್ಬರ ಅದರಿಂದ ಎನೂ ಉಪಯೋಗ ವಿಲ್ಲದಂತಗಿದೆ.ಯೂರಿಯಾ ಜೊತೆ ಬೇರೆ ಗೊಬ್ಬರಗಳನ್ನ ಲಿಂಕ್ ಕೊಟ್ರೆ ನಾವು ಗೊಬ್ಬರ ಹೇಗೆ ಪಡೆಯೋದು ಹೀಗೆ ಎಂದು ರೈತರ ನೋವಾಗಿದೆ. ಕಬ್ಬು, ಗೋವಿನ ಜೋಳದ ಬೆಳೆಯನ್ನ ನಾವು ನಾಶ ಮಾಡುವಂತ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಅಳಿಲು ತೋಡಿಕೊಳ್ಳುತ್ತಿದ್ದಾರೆ. ಗೊಬ್ಬರ ನೀಡದಿದ್ದರೆ ಅನ್ನದಾತರು ನೇಣು ಹಾಕಿಕ್ಕೊಳ್ಳುವ ಪರಿಸ್ಥಿತಿ ಎದುರಾಗಿದೆ