
ಧಾರವಾಡ: ಕಳೆದ 15 ವರ್ಷಗಳಿಂದ ಅವಳಿನಗರದಲ್ಲಿ ಜನಾಶೀರ್ವಾದದೊಂದಿಗೆ 3 ನೇ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮಾರ್ಗದರ್ಶನ ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಜರುಗಿವೆ.ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಸ್ಥಳಿಯ ಶಾಸಕರಿಗೆ ಅದರಲ್ಲಿ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸುಮಾರು 25 ಕೋಟಿ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳು ಸಾಗಲು ಬಿಜೆಪಿ ಸರ್ಕಾರ ಅನುವು ಮಾಡಿಕೊಟ್ಟಿತ್ತು. ಹದಿನೈದು ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿ ಸಾವಿರಾರು ಕೋಟಿ ಅನುದಾನದಡಿ ಕಾಮಗಾರಿಗಳು ಅಭಿವೃದ್ಧಿ ಕಾರ್ಯಗಳು ಆಗಿವೆ.ಮಹಾನಗರ ಪಾಲಿಕೆ ಕರ್ನಾಟಕದ ಅತಿದೊಡ್ಡ ಎರಡನೆ ಪಾಲಿಕೆಯಾಗಿದ್ದು ಸ್ವಚ್ಚತೆಯಲ್ಲಿ ಅಗ್ರಗಣ್ಯರಾಗಿದ್ದು ವಿರೋಧ ಪಕ್ಷದ ನಾಯಕರಿಗೆ ಅರಿವಿಲ್ಲ ಎಂದೆನಿಸುತ್ತದೆ. ಎಂದು ಪಾಲಿಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಕಿಡಿಕಾರಿದ್ದಾರೆ.ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ಬಾರಿ ಆಯುಕ್ತರನ್ನ ಬದಲಾಯಿಸಿ ಅಭಿವೃದ್ಧಿ ಕಾರ್ಯಗಳಿಗೆ ತಡೆಯಾಗಿದ್ದರೂ ಕೂಡ, 300ಕೋಟಿ ಅನುದಾನ ಹಣ ರಾಜ್ಯ ಸರ್ಕಾರದಿಂದ ಬರಬೇಕಾಗಿದ್ದು, ಹಾಗೂ ನೂರಾರು ಕೋಟಿ ಪಿಂಚಣಿ ಹಣ ರಾಜ್ಯ ಸರ್ಕಾರದಿಂದ ಬರದೆ ಇರುವ ಬಗ್ಗೆ ವಿರೋಧ ಪಕ್ಷದ ನಾಯಕರು ಗಮನ ಹರಿಸಬೇಕು. ಈಗಾಗಲೆ ವಿರೋಧ ಪಕ್ಷದ ನಾಯಕರು ಹೇಗೆ ಕಾರ್ಯ ನಿರ್ವಹಿಸಿದಾರೆ ಎನ್ನುವ ಬಗ್ಗೆ ಗಮನ ಹರಿಸಬೇಕು ಹಾಗು ಸುಳ್ಳು ಹೇಳಿಕೆಗಳನ್ನು ನೀಡದೆ ಅವಳಿನಗರದ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ವಿರುದ್ಧ ಪಕ್ಷದ ನಾಯಕರಿಗೆ ಮಾಜಿ ಮೇಯರ್ ಅಂಚಟಗೇರಿ ಆಗ್ರಹಿಸಿದ್ದಾರೆ
