
ಧಾರವಾಡ: ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪತಿ ನೇಣಿಗೆ ಶರಣ ಆದ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೇಟೆಗೆರಿ ಗ್ರಾಮದಲ್ಲಿ ನಡೆದಿದೆ…ಮೃತ ಈಶ್ವರ ಮಸೂತಿ ಎಂಬುವವನೇ ನೇಣಿಗೆ ಶರಣಾದ ಪತಿಯಾಗಿದ್ದು, ನಿನ್ನ ತಡ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..ಧಾರವಾಡ ತಾಲೂಕಿನ ಬಿಜೆಪಿಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಶಶಿಕಲಾ ಅವರ ಪತಿ ಈಶ್ವರ ನೇಣಿಗೆ ಶರಣು ಅಗಿದ್ದಾರೆ. ಅಲ್ಲದೇ ಧಾರವಾಡ ಗ್ರಾಮೀಣ ಮಾಜಿ ಶಾಸಕಿಯ ದೂರದ ಸಂಬಂಧಿ ಈಶ್ವರ ಆಗಿದ್ದರು.. ಈ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ, ಆತ್ಮಹತ್ಯೆಗೆ ಏನು ಕಾರಣ ಎಂದು ತನಿಖೆ ಪೊಲೀಸರು ನಡೆಸಿದ್ದಾರೆ..
