ಹುಬ್ಬಳ್ಳಿ: ಹುಬ್ಬಳ್ಳಿಯ ಉತ್ತರ ವಿಭಾಗದ ಸಹಾಯಕ ಪೋಲಿಸ ಆಯುಕ್ತರಾಗಿ ಶಿವಪ್ರಕಾಶ್ ರಾಜೇಂದ್ರ ನಾಯ್ಕ ಅವರು ನೂತನವಾಗಿ ಇಂದು ಅಧಿಕಾರ ವಹಿಸಿಕೊಂಡರು.
ಉತ್ತರ ವಿಭಾಗದ ಸಹಾಯಕ ಪೋಲಿಸ ಆಯುಕ್ತರಾಗಿದ್ದ ಬಲಪ್ಪ ನಂದಗಾವಿ ಅವರ ಸ್ಥಳಕ್ಕೆ ಶಿವಪ್ರಕಾಶ್ ನಾಯ್ಕ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶವನ್ನು ಹೊರಡಿಸಿತ್ತು.
ಇನ್ನು ಶಿವಪ್ರಕಾಶ್ ನಾಯ್ಕ ಅವರು ಈ ಹಿಂದೆ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದರು, ಅವರನ್ನು ಸರ್ಕಾರ ಇದೀಗ ಹುಬ್ಬಳ್ಳಿಯ ಉತ್ತರ ವಿಭಾಗದ ಸಹಾಯಕ ಪೋಲಿಸ ಆಯುಕ್ತರನ್ನಾಗಿ ನೇಮಕ ಮಾಡಿದೆ.