ಹುಬ್ಬಳ್ಳಿ: ವಿದ್ಯಾನಗರ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ವೃದ್ದೆಯ ಮಾಂಗಲ್ಯ ಸರ ಕಳ್ಳತನದ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಕುಲರಸ್ತೆಯ ನಿವಾಸಿ ಮಹಾಂತೇಶ ಕಮ್ಮಾರ, ಕುಂದಗೋಳ ಮೂಲದ ವೀರಭದ್ರಯ್ಯ ಹಿರೇಮಠ ಬಂಧಿತ ಆರೋಪಿಗಳಾಗಿದ್ದು, ಇವರು ಗುರುವಾರ ವಿದ್ಯಾನಗರದ ಬನಶಂಕರಿ ಬಡಾವಣೆಯಲ್ಲಿ ರಾತ್ರಿ ಕೊರಿಯರ್ ಬಾಯ್ ನೆಪದಲ್ಲಿ ವೃದ್ದೆ ಶೋಭಾ ಕುಲಕರ್ಣಿ ಅವರ ಕೊರಳಲ್ಲಿದ್ದ 30 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದರು.
ಬಳಿಕ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವಿದ್ಯಾನಗರ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು.
ಬಳಿಕ ಅಪರಾಧ ವಿಭಾಗದ ಡಿಸಿಪಿ ರವೀಶ್ ಮಾರ್ಗದರ್ಶನದಲ್ಲಿ ಪಿಐ ಗೌಳಿ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದ ತಂಡ 24 ಗಂಟೆಯಲ್ಲಿ ಕಳ್ಳತನ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಪೋಲಿಸರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.