[ad_1]
ಮೈಸೂರು:
ಇತ್ತೀಚೆಗೆ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ ನೀಡಿರುವ ರಾಜ್ಯ ಸರ್ಕಾರ, ಶೀಘ್ರದಲ್ಲೇ ಕೃಷ್ಣರಾಜ ಸಾಗರ ಅಣೆಕಟ್ಟಿನಿಂದ ಎಕ್ಸ್ಪ್ರೆಸ್ ಲೈನ್ ಮೂಲಕ ಬೆಂಗಳೂರು ದಕ್ಷಿಣ, ಉತ್ತರಕ್ಕೆ 7 ಟಿಎಂಸಿ ಅಡಿ ನೀರು ಸರಬರಾಜು ಮಾಡಲು ಮುಂದಾಗಿದೆ. ಇದು ಗ್ರೇಟರ್ ಬೆಂಗಳೂರು ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಿದೆ.
ಕೆಆರ್ಎಸ್ ಅಣೆಕಟ್ಟಿನಿಂದ ಎಕ್ಸ್ಪ್ರೆಸ್ ಪೈಪ್ಲೈನ್ ಹಾಕಲು ರಾಜ್ಯ ಸರ್ಕಾರ ಯೋಜಿಸಿದೆ. ಇದು ಕೆಂಗೇರಿ, ಸರ್ಜಾಪುರ, ಆನೇಕಲ್, ನೆಲಮಂಗಲದ ಕೆಲವು ಭಾಗಗಳು, ದೇವನಹಳ್ಳಿ ಮತ್ತು ಹೊಸಕೋಟೆಗೆ ನೀರು ಸರಬರಾಜು ಮಾಡಲು ಅನುವು ಮಾಡಿಕೊಡುತ್ತದೆ ಮತ್ತು 50 ರಿಂದ 60 ಲಕ್ಷ ಜನಸಂಖ್ಯೆಗೆ ನೀರು ಪೂರೈಕೆ ಮಾಡಲಿದೆ.
ಅಂತರ್ಜಲ ಅಥವಾ ಟ್ಯಾಂಕರ್ಗಳು ಮಾತ್ರ ನೀರಿನ ಮೂಲವಾಗಿದ್ದ ಈ ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ಜನ ಕಾವೇರಿ ನೀರಿಗಾಗಿ ಕಾಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ತೀವ್ರ ಬರಗಾಲದ ಸಮಯದಲ್ಲಿ ಜನ ಸಂಪೂರ್ಣ ಟ್ಯಾಂಕರ್ಗಳ ಮೇಲೆ ಅವಲಂಬಿತರಾಗಿದ್ದರು. ಇದು ಭಾರತದ ಸಿಲಿಕಾನ್ ವ್ಯಾಲಿಯ ವರ್ಚಸ್ಸಿಗೆ ತೀವ್ರ ಹಾನಿಯನ್ನುಂಟುಮಾಡಿತು.
[ad_2]
Source link