
ಧಾರವಾಡ: ಆಹಾರ ಸುರಕ್ಷತಾ ಅಧಿಕಾರಿಗಳು ಇಂದು ಧಾರವಾಡ ನಗರದ ಬೀದಿ ಬದಿ ಇರುವ ವ್ಯಾಪಾರಸ್ಥರಿಗೆ ನಿರೀಕ್ಷಣೆ ಮಾಡಿ ಶುಚಿತ್ವ ಇಲ್ಲದ ಅಂಗಡಿಗಳಿಗೆ ನೋಟಿಸ್ ನೀಡಿ ದಂಡ ವಿಧಿಸಲಾಯಿತು. ಅಲ್ಲದೇ ಶುಚಿತ್ವ ಬಗ್ಗೆ ಮಾಹಿತಿಯನ್ನು ನೀಡಿದರು. ಧಾರವಾಡದ ಹೊಸ ಬಸ್ ನಿಲ್ದಾಣ ಮತ್ತು ಲೈನ್ ಬಜಾರ್, ಹುಬ್ಬಳಿ ಯಲ್ಲಿ ಕೂಡ ಕಾರ್ಯಾಚರಣೆ ಮಾಡಲಾಯಿತು. ಆಹಾರ ಸುರಕ್ಷತಾ ಅಧಿಕಾರಿಗಳಾದ ಅಲ್ತಾಫ್ ಅಹಮ್ಮದ್ ಮತ್ತು ಪ್ರಕಾಶ್ ಮಲ್ಲಾಪುರ ಈ ವೇಳೆ ನಿರೀಕ್ಷಣೆ ಮಾಡಿ ದಂಡ ವಿಧಿಸಿದರು..
