ಬರ್ಮಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡದ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು 87 ರನ್ ಬಾರಿಸುವ ಮೂಲಕ 51 ವರ್ಷದ ಹಿಂದಿನ ಭಾರತೀಯ ದಾಖಲೆಯೊಂದನ್ನು ಮುರಿದಿದ್ದಾರೆ. ಬರ್ಮಿಂಗ್ಹ್ಯಾಮ್ನ(Birmingham) ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಟೆಸ್ಟ್ನಲ್ಲಿ ಆರಂಭಿಕನಾಗಿ ಅತ್ಯಧಿಕ ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು.
ಇದುವರೆಗೂ ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಆರಂಭಿಕನಾಗಿ ಅತ್ಯಧಿಕ ರನ್ ಗಳಿಸಿದ ದಾಖಲೆ ಮಾಜಿ ದಿಗ್ಗಜ ಆಟಗಾರ ಸುಧೀರ್ ನಾಯಕ್ ಹೆಸೆರಿನಲ್ಲಿತ್ತು. ಸುಧೀರ್ ಅವರು 1974 ರಲ್ಲಿ 77 ರನ್ ಬಾರಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ ಇದೀಗ ಜೈಸ್ವಾಲ್(87) ಈ ದಾಖಲೆ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಜೈಸ್ವಾಲ್ 10 ರನ್ ಬಾರಿಸುತ್ತಿದ್ದರೆ ಅತಿ ವೇಗವಾಗಿ ಟೆಸ್ಟ್ನಲ್ಲಿ 2 ಸಾವಿರ ರನ್ ಪೂರೈಸಿದ ಭಾರತೀಯ ಆಟಗಾರ ಎನಿಸಿಕೊಳ್ಳುವ ಅವಕಾಶವಿತ್ತು. \
ಬರ್ಮಿಂಗ್ಹ್ಯಾಮ್ ಆರಂಭಿಕನಾಗಿ ಅತ್ಯಧಿಕ ರನ್
ಯಶಸ್ವಿ ಜೈಸ್ವಾಲ್ – 87 (2025)
ಸುಧೀರ್ ನಾಯ್ಕ್ – 77 (1974)
ಸುನಿಲ್ ಗವಾಸ್ಕರ್ -68 (1979)
ಚೇತೇಶ್ವರ ಪೂಜಾರ -66 (2022)
ಸುನಿಲ್ ಗವಾಸ್ಕರ್ – 61 (1979)
ಮೊದಲ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. 159 ಎಸೆತಗಳಲ್ಲಿ 101 ರನ್ ಗಳಿಸಿದ್ದರು. ದ್ವಿತೀಯ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸುವ ಮೂಲಕ ಅವರು ತಂಡಕ್ಕೆ ಆಸರೆಯಾದರು. ಎರಡೂ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಜೈಸ್ವಾಲ್ ವಿಕೆಟನ್ನು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಉರುಳಿಸಿದ್ದು ವಿಶೇಷ.
ಇದನ್ನೂ ಓದಿ IND vs ENG 2n Test: ಅರ್ಧಶತಕ ಬಾರಿಸಿ ರೋಹಿತ್ ದಾಖಲೆ ಮುರಿದ ಜೈಸ್ವಾಲ್
ಜೈಸ್ವಾಲ್ ಇದೇ ವೇಳೆ ಸೇನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ಅತಿ ಹೆಚ್ಚು ಬಾರಿ 50+ ರನ್ ಬಾರಿಸಿದ ಬಾರಿಸಿದ ಭಾರತೀಯ ಆರಂಭಿಕ ಆಟಗಾರರ ಎನಿಸಿದರು. ಇದುವರೆಗೂ ಈ ದಾಖಲೆ ರೋಹಿತ್ ಶರ್ಮ ಹೆಸರಿನಲ್ಲಿತ್ತು. ರೋಹಿತ್ ಆರಂಭಿಕ ಆಟಗಾರನಾಗಿ 4 ಬಾರಿ 50+ ಸ್ಕೋರ್ ದಾಖಲಿಸಿದ್ದರು. ಇದೀಗ ಜೈಸ್ವಾಲ್ 5 ಬಾರಿ 50+ ರನ್ ಬಾರಿಸಿ ದಾಖಲೆ ತಮ್ಮ ಹೆಸರಿಗೆ ಬರೆದಿದ್ದಾರೆ.