[ad_1]
ಟೆಲ್ ಅವಿವ್ (ಇಸ್ರೇಲ್): ಹಮಾಸ್ನ (Hamas) ಗಾಜಾ ಮುಖ್ಯಸ್ಥ ಮೊಹಮ್ಮದ್ ಸಿನ್ವಾರ್ (Muhammad Sinwar)ನನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಬುಧವಾರ (ಮೇ 28) ಘೋಷಿಸಿದ್ದಾರೆ. ಮೇ 14ರಂದು ಇಸ್ರೇಲ್ ನಡೆಸಿದ ಬೃಹತ್ ವೈಮಾನಿಕ ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ಮೊಹಮ್ಮದ್ ಸಿನ್ವಾರ್ ತೀವ್ರವಾಗಿ ಗಾಯಗೊಂಡಿದ್ದಾನೆ ಎಂಬ ವರದಿಗಳು ಬಂದಿದ್ದವು. ಆದರೆ ಆವೇಳೆ ಇಸ್ರೇಲ್ ರಕ್ಷಣಾ ಪಡೆಗಳು ಈತ ಸಾವನ್ನಪ್ಪಿದ್ದಾರೆಯೇ ಎಂದು ಖಚಿತಪಡಿಸಿರಲಿಲ್ಲ.
2024ರ ಅಕ್ಟೋಬರ್ನಲ್ಲಿ ಇಸ್ರೇಲ್ ಮಿಲಿಟರಿಯೊಂದಿಗಿನ ಘರ್ಷಣೆಯಲ್ಲಿ ಕೊಲ್ಲಲ್ಪಟ್ಟ ಹಮಾಸ್ ಮಾಜಿ ಮುಖ್ಯಸ್ಥ ಯಾಹ್ಯಾ ಸಿನ್ವಾರ್ನ (Yahya Sinwar) ಸಹೋದರನೇ ಈ ಮೊಹಮ್ಮದ್ ಸಿನ್ವಾರ್. ಯಾಹ್ಯಾ ಸಿನ್ವಾರ್ 2023ರ ಅಕ್ಟೋಬರ್ನಲ್ಲಿ ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರರಾಗಿದ್ದ. ಇದು ಗಾಜಾದಲ್ಲಿ ಯುದ್ಧಕ್ಕೆ ಕಾರಣವಾಯಿತು. ಯಾಹ್ಯಾ ಅವರ ಹತ್ಯೆಯ ನಂತರ ಮುಹಮ್ಮದ್ ಸಿನ್ವಾರ್ನನ್ನು ಆ ಹುದ್ದೆಗೆ ಬಡ್ತಿ ನೀಡಲಾಯಿತು.
ಗಾಜಾದಲ್ಲಿ ಉಳಿದಿರುವ ಹಮಾಸ್ನ ಕೊನೆಯ ಉನ್ನತ ಕಮಾಂಡರ್ಗಳಲ್ಲಿ ಒಬ್ಬನಾದ ಮೊಹಮ್ಮದ್ ಸಿನ್ವಾರ್ ಮೇಲೆ ಮೇ 14ರಂದು ಇಸ್ರೇಲ್ನ ರಕ್ಷಣಾ ಪಡೆಗಳು ನಿಖರವಾದ ಡ್ರೋನ್ ದಾಳಿ ನಡೆಸಿದಾಗ ಆತ ಭೂಗತ ಅಡಗು ತಾಣದಲ್ಲಿದ್ದ ಎನ್ನಲಾಗಿದೆ. ನಿಖರವಾದ ದಾಳಿಯ ನಂತರದ ವಿಡಿಯೊವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಅದರಲ್ಲಿ ಆಸ್ಪತ್ರೆಯ ಕೆಳಗೆ ಒಂದು ಸುರಂಗವು ಹಮಾಸ್ ಅಡಗುತಾಣಕ್ಕೆ ಕರೆದೊಯ್ಯುವುದನ್ನು ಕಂಡುಬಂದಿದೆ.
צה”ל ושב”כ השמידו תשתית טרור תת-קרקעית של ארגון הטרור חמאס מתחת לבית החולים האירופאי שבחאן יונס שבדרום רצועת עזה
מתחילת המלחמה, צה”ל ושב”כ פועלים להשמדה ונטרול של תשתיות תת-קרקע של ארגון הטרור חמאס ברצועת עזה.
מוקדם יותר היום, צה”ל ושב”כ תקפו באופן ממוקד מחבלים בארגון הטרור… pic.twitter.com/gdLAJOpWJ4
— צבא ההגנה לישראל (@idfonline) May 13, 2025
ಇಸ್ರೇಲ್ ಪ್ರಧಾನಿ ಹೇಳಿದ್ದೇನು?
“ನಾವು ಮೊಹಮ್ಮದ್ ಸಿನ್ವಾರ್ ಅವರನ್ನು ಹೊರ ಹಾಕಿದ್ದೇವೆ” ಎಂದು ಪ್ರಧಾನಿ ನೆತನ್ಯಾಹು ಇಸ್ರೇಲ್ ಸಂಸತ್ತಿನ ನೆಸ್ಸೆಟ್ನಲ್ಲಿ ತಿಳಿಸಿದ್ದಾರೆ. “ಇಸ್ರೇಲ್ ಸೇನೆಯು ಇಸ್ಮಾಯಿಲ್ ಹನಿಯೆ, ಮುಹಮ್ಮದ್ ಡೀಫ್, ಯಾಹ್ಯಾ ಸಿನ್ವಾರ್ ಮತ್ತು ಈಗ ಮೊಹಮ್ಮದ್ ಸಿನ್ವಾರ್ನನ್ನು ಹೊಡೆದುರುಳಿಸಿದ್ದೇವೆʼʼ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Pakistan’s Nur Khan Airbase: ಭಾರತದ ದಾಳಿಯಿಂದ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಗೆ ಭಾರೀ ಹಾನಿ; ದಾಳಿಯ ಚಿತ್ರಗಳು ವೈರಲ್
ಯಾರು ಈ ಮೊಹಮ್ಮದ್ ಸಿನ್ವಾರ್?
- 1975ರಲ್ಲಿ ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ ಸಿನ್ವಾರ್ ಮತ್ತು ಆತನ ಕುಟುಂಬವು 1948ರಲ್ಲಿ ಅಶ್ಕೆಲೋನ್ ಬಳಿಯ ಹಳ್ಳಿಯಿಂದ ಪಲಾಯನ ಮಾಡಿ ದಕ್ಷಿಣ ಗಾಜಾ ಪಟ್ಟಿಯಲ್ಲಿ ನೆಲೆಸಿತು.
- 1991ರಲ್ಲಿ ಸಿನ್ವಾರ್ ಹಮಾಸ್ನ ಮಿಲಿಟರಿ ಚಳುವಳಿಗೆ ಸೇರಿದ.
- 1991ರಲ್ಲಿ ಶಂಕಿತ ಭಯೋತ್ಪಾದನೆಗಾಗಿ ಇಸ್ರೇಲ್ ಸಿನ್ವಾರ್ನನ್ನು ಬಂಧಿಸಿತು. ಬಳಿಕ ಆತನನ್ನು 1 ವರ್ಷದೊಳಗೆ ಬಿಡುಗಡೆ ಮಾಡಲಾಯಿತು.
- 2005ರಲ್ಲಿ ಸಿನ್ವಾರ್ ಹಮಾಸ್ನ ಖಾನ್ ಯೂನಿಸ್ ಬ್ರಿಗೇಡ್ನ ಕಮಾಂಡರ್ ಆದ.
- ಕಳೆದ ಜುಲೈಯಲ್ಲಿ ಹಮಾಸ್ನ ಉನ್ನತ ಮಿಲಿಟರಿ ಕಮಾಂಡರ್ ಮುಹಮ್ಮದ್ ಡೀಫ್ ಹತ್ಯೆಯ ನಂತರ ಸಿನ್ವಾರ್ ಭಯೋತ್ಪಾದಕ ಗುಂಪಿನ ಮಿಲಿಟರಿ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದ. ಇಸ್ರೇಲ್ ಪಡೆಗಳು ಯಾಹ್ಯಾನನ್ನು ಕೊಂದ ನಂತರ, ಸಿನ್ವಾರ್ ಗಾಜಾ ಪಟ್ಟಿಯಲ್ಲಿ ಭಯೋತ್ಪಾದಕ ಗುಂಪಿನ ನಾಯಕನಾದ.
- ಸಿನ್ವಾರ್ ಯಾವಾಗಲೂ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಹೀಗಾಗಿ ಈತನನ್ನು ‘ನೆರಳು’ ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿತ್ತು.
[ad_2]
Source link