[ad_1]
ಬೊಗೋಟಾ: ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ(Colombian Presidential Candidate) ಮೇಲೆ ಚುನಾವಣೆ ಪ್ರಚಾರ ಕಾರ್ಯಕ್ರಮದ ವೇಳೆ ಗುಂಡಿನ ದಾಳಿ(Colombia Shootout) ನಡೆದಿದೆ. ಸೆನೆಟರ್ ಮಿಗುಯೆಲ್ ಉರಿಬೆ ಅವರ ಮೇಲೆ ಶನಿವಾರ ಬೊಗೋಟಾದಲ್ಲಿ ಗುಂಡು ಹಾರಿಸಲಾಗಿದೆ ಎಂದು ಸರ್ಕಾರ ಮತ್ತು ಅವರ ಪಕ್ಷ ತಿಳಿಸಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎನ್ನಲಾಗಿದೆ. 2026 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ 39 ವರ್ಷದ ಉರಿಬೆ, ಮಾಜಿ ಕೊಲಂಬಿಯಾದ ಅಧ್ಯಕ್ಷ ಅಲ್ವಾರೊ ಉರಿಬೆ ಸ್ಥಾಪಿಸಿದ ಡೆಮಾಕ್ರಟಿಕ್ ಸೆಂಟರ್ ಪಕ್ಷದ ಸದಸ್ಯರಾಗಿದ್ದಾರೆ. ಈ ದಾಳಿಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.
JUST IN: Colombian presidential candidate Miguel Uribe shot in Bogota during a political rally.
According to local reports, Uribe was hit with a bullet and was rushed to the hospital.
“We energetically reject this attack that not only endangers the life of a political leader,… pic.twitter.com/sycXZZZVg2
— Collin Rugg (@CollinRugg) June 8, 2025
ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್ ಸೆಂಟರ್ ಪಕ್ಷ, ಖಂಡನೆ ವ್ಯಕ್ತಪಡಿಸಿದೆ. ಉರಿಬೆ ಶನಿವಾರ ರಾಜಧಾನಿಯ ಫಾಂಟಿಬಾನ್ ನೆರೆಹೊರೆಯಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾಗ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅವರ ಬೆನ್ನಿಗೆ ಗುಂಡು ಹಾರಿಸಿದರು ಎಂದು ಹೇಳಿದ್ದಾರೆ. ಇನ್ನು ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತನನ್ನು ಬಂಧಿಸಲಾಗಿದೆ ಮತ್ತು ಯಾವುದೇ ಪ್ರಭಾವಿ ವ್ಯಕ್ತಿಯ ಕೈವಾಡ ಇದೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಹೇಳಿದ್ದಾರೆ. ಉರಿಬೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಅವರು ಭೇಟಿ ನೀಡಿದ್ದರು ಎಂದು ಸ್ಯಾಂಚೆಜ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Pakistani TikToker: ಪಾಕಿಸ್ತಾನಿ ಟಿಕ್ಟಾಕ್ ಸ್ಟಾರ್ ಶೂಟೌಟ್; ಮರ್ಯಾದಾ ಹತ್ಯೆ ಶಂಕೆ
ಕೊಲಂಬಿಯಾ ಅಧ್ಯಕ್ಷರು ಕೂಡ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಖಂಡನೆ ವ್ಯಕ್ತಪಡಿದ್ದಾರೆ. ಅಲ್ಲದೇ ಈ ವಿಧ್ವಂಸಕ ಕೃತ್ಯದ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶ ನೀಡಿದ್ದಾರೆ. ಉರಿಬೆ ಕೊಲಂಬಿಯಾದ ಪ್ರಮುಖ ಕುಟುಂಬದಿಂದ ಬಂದವರಾಗಿದ್ದು, ಅವರ ತಂದೆ ಉದ್ಯಮಿ ಮತ್ತು ಯೂನಿಯನ್ ನಾಯಕರಾಗಿದ್ದರು. ಅವರ ತಾಯಿ, ಪತ್ರಕರ್ತೆ ಡಯಾನಾ ಟರ್ಬೇ ಅವರನ್ನು 1990 ರಲ್ಲಿ ದಿವಂಗತ ಕಾರ್ಟೆಲ್ ನಾಯಕ ಪ್ಯಾಬ್ಲೊ ಎಸ್ಕೋಬಾರ್ ನೇತೃತ್ವದ ಬಂಡುಕೋರರು ಅಪಹರಿಸಿ ಹತ್ಯೆಗೈದಿದ್ದರು.
[ad_2]
Source link