
ಧಾರವಾಡ: ಗುಳೆದಕೊಪ್ಪ ಗ್ರಾಮದ ರೈತ ಪುಂಡಲಿಕ ಗಾಯಕವಾಡ ಎಂಬುವರ ಹೊಲದಲ್ಲಿ ಚಿರತೆಯೊಂದು ಪ್ರತ್ಯಕ್ಷವಾದ ಘಟಯ ಬೆಳಕಿಗೆ ಬಂದಿದೆ.

ಹೌದು ಧಾರವಾಡ ತಾಲೂಕಿನ ಗುಳೆದಕ್ಕೊಪ್ದ,, ತೇಗೂರು, ಕೂಟುರು ಗ್ರಾಮಗಳಲ್ಲಿ ಚಿರತೆ ಆತಂಕ ಹೆಚ್ಚಾಗಿದೆ.ಇನ್ನು ಪ್ರತ್ಯಕ್ಷವಾದ ಚಿರತೆ ಮಲಗಿರುವ ಪೋಟೋವನ್ನ ರೈತ ಪುಂಡಲಿಕ ಸೆರೆ ಹಿಡಿದಿದ್ದಾರೆ. ಚಿರತೆಯಿಂದ ಭಯಗೊಂಡ ಸುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬೇಟಿ ನೀಟಿ ಚಿರತೆ ಬಗ್ಗೆ ಪರಿಶಿಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಇಡೀ ರಾತ್ರಿಯಲ್ಲ ಚಿರತೆ ಹಿಡಿಯಲು ಕಾರ್ಯಚರಣೆ ನಡೆಸಿದ್ದಾರೆ..