
ಧಾರವಾಡ: ಸರ್ಕಾರಿ ಶಾಲೆಯನ್ನ ಖಾಸಗಿ ಶಾಲೆಯನ್ನು ಮೀರಿಸುವಂತೆ ನಿರ್ಮಾಣ ಮಾಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶಿಕ್ಷಣದ ಬಗ್ಗೆ ಇರುವ ಕಾಳಜಿಯನ್ನು ತೋರಿಸಿದ್ದಾರೆ.

ಇವರ ಜನಪರ ಕಾಳಜಿಗೆ ಕಮಲಾಪುರ ಜನತೆ ಪರವಾಗಿ ಮಾಜಿ ಮೇಯರ್ ಈರೇಶ ಅಂಚಟಗೇರಿ ಅನಂತ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ. ಧಾರವಾಡದ ಕಮಲಾಪೂರದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ನಂ.04,ಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಭಾರತ ಸರ್ಕಾರದ ಪ್ರಸ್ತಾವನೆ ಮೇರೆಗೆ ಕೋಲ್ ಇಂಡಿಯಾ ಲಿ. ನಿಂದ ಸಿ.ಆಎಸ್.ಆರ್ ಅನುದಾನ ರೂ. 1.62 ಕೋಟಿ ಅನುದಾನ ನೀಡಿದ್ದರು.ಮಾಜಿ ಮೇಯರ ಈರೇಶ ಅಂಚಟಗೇರಿ ಹು- ಧಾರವಾಡ ಪಾಲಿಕೆಯ 36, ಲಕ್ಷಗಳ ಅನುದಾನದಲ್ಲಿ ಮಾದರಿ ಶಾಲೆ ನಿರ್ಮಾಣಗೊಂಡಿದೆ. ಮಹಾನಗರ ಪಾಲಿಕೆ ಸದಸ್ಯರ ಅನುದಾನದಡಿ, 2024-25ರಲ್ಲಿ ಶಾಲಾ ಕಟ್ಟಡ ಪುನರ್ ನಿರ್ಮಿಸಲಾಗಿದ್ದು , ಅಂದಾಜು 2ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲೆ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಅಂಚಟಗೇರಿ ವೀಕ್ಷಿಸಿ ಅಚ್ಚುಕಟ್ಟಾಗಿ ಪಾಲಿಕೆ ಸಹಕಾರದೊಂದಿಗೆ ಶಾಲೆ ನಿರ್ಮಾಣವಾಗಿದ್ದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಈ ಕಾರ್ಯಕ್ಕೆ ಇಡಿ ಕಮಲಾಪುರ ಜನತೆ ಧಾರವಾಡ ಜಿಲ್ಲೆಯಲ್ಲಿ ಇಂತಹ ಮಾದರಿಶಾಲೆ ಎಲ್ಲಿಯೂ ನಿರ್ಮಾಣವಾಗಿಲ್ಲ ಎನ್ನುವ ಮಾತನ್ನು ಜನರಿಂದ ಕೇಳಿ ಬರುತ್ತಿದ್ದು ಕೇಂದ್ರ ಸಚಿವರಿಗೆ ಹಾಗು ಪಾಲಿಕೆ ಸದಸ್ಯರಿಗೆ ಸ್ಥಳೀಯರು ಅಭಿನಂದಿಸಿದಾರೆ