
ಹುಬ್ಬಳ್ಳಿ: ಮಹದಾಯಿ ಹೋರಾಟ ಇದು ನಿನ್ನೆ ಮೊನ್ನೆಯದಲ್ಲ. ರೈತರಿಗೆ ಮಾತ್ರವೇ ಇರುವ ಯೋಜನೆಯಂತೂ ಅಲ್ಲವೇ ಅಲ್ಲ. ಹುಬ್ಬಳ್ಳಿಧಾರವಾಡ ಅವಳಿನಗರದ ಜನರ ಕುಡಿಯುವ ನೀರಿನ ಬವಣೆ ನೀಗಿಸುವ ಮಹತ್ವದ ಯೋಜನೆ. ಈ ಯೋಜನೆಯ ಹೋರಾಟ ಈಗ ಹೊಸಸ್ವರೂಪವನ್ನು ಪಡೆದುಕೊಳ್ಳಲಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತೀವಿ ನೋಡಿ..ಮಹದಾಯಿ ನೀರಿಗಾಗಿ ಕಳೆದ ಸರಿಸುಮಾರು10 ವರ್ಷದಿಂದ ನಿರಂತರ ಧರಣಿನಡೆಸುತ್ತಿರುವ ರೈತಸೇನೆ, ಮಹದಾಯಿ, ಕಳಸಾ ಬಂಡೂರಿ, ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿದೆ. ಆದರೆಈಗ ಮಹದಾಯಿ ಹೋರಾಟಗಾರರುವಿನೂತನ ರೀತಿಯಲ್ಲಿ ಧರಣಿ ನಡೆಸಲು ಮುಂದಾಗಿದ್ದಾರೆ. ಹೌದು.. ಜುಲೈ 31ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಮಾಡಲು ಮುಂದಾಗಿದ್ದಾರೆ.

ರೈತ ಹೋರಾಟಗಾರರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದೂ ಆಯ್ತು. ನ್ಯಾಯಾಧೀಕರಣದತೀರ್ಪಿ ನಂತೆ ನೀರು ಹರಿಸಲು ಬೇಕಾದಅನುಮತಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆನಿರ್ದೇಶನ ನೀಡಬೇಕು ಎಂದು ಮನವಿಮಾಡಿದ್ದು ಆಯ್ತು ಈಗ ಕೇಂದ್ರ ಸಚಿವರಕಚೇರಿಯ ಮುಂದೆ ಮತ್ತೆ ಹೋರಾಟದ ಕಹಳೆ ಮೊಳಗಿಸಲು ಮುಂದಾಗಿದ್ದಾರೆ.ಇನ್ನೂ ಮಹದಾಯಿ ನೀರು ಹಂಚಿಕೆ ಕುರಿತಂತೆ 2018ರಲ್ಲೇ ನ್ಯಾಯಾಧೀಕರಣ ತೀರ್ಪುನೀಡಿದೆ. ಕೇಂದ್ರ ಸರ್ಕಾರವೂ ಅದಕ್ಕೆ ಗೆಜೆಟ್ ನೋಟಿಫಿಕೇಶನ್ ಕೂಡ ಮಾಡಿದೆ. ಆದರೆಈವರೆಗೂ ಕೇಂದ್ರ ಸರ್ಕಾರದ ಅರಣ್ಯ ಮತ್ತುಪರಿಸರ ಸಚಿವಾಲಯದಿಂದ ಅನುಮತಿಸಿಗುತ್ತಿಲ್ಲ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಮಹದಾಯಿಯಲ್ಲಿ ನಿರ್ಲಕ್ಷ್ಯತೋರಿದ ಈ ಭಾಗದ ಕೇಂದ್ರ ಸಚಿವರುರಾಜೀನಾಮೆ ನೀಡಬೇಕು ಎಂದು ರೈತಮುಖಂಡರು ಆಗ್ರಹಿಸಿದ್ದಾರೆ.ಒಟ್ಟಿನಲ್ಲಿ ಮಹದಾಯಿ ಯೋಜನೆಗೆ ಈ ಭಾಗದ ಜನರು, ರೈತರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಹೀಗಿದ್ದರೂ ಈ ಸಮಸ್ಯೆ ಇತ್ಯರ್ಥಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ಮಹದಾಯಿನೀರಿಗಾಗಿ ಮತ್ತೇ ಹೋರಾಟದ ಹಾದಿಯನ್ನು ತುಳಿದಿರುವುದು ನಿಜಕ್ಕೂ ಚಿಂತಾಜಾನಕವಾಗಿದೆ