
ರೇಣುಕಾಸ್ವಾಮಿಗೆ (Renukaswamy) ನ್ಯಾಯ ಸಿಗಲಿದೆ ಎಂಬ ನಟಿ ರಮ್ಯಾ (Ramya) ಪೋಸ್ಟ್ಗೆ ದರ್ಶನ್ ಅಭಿಮಾನಿಗಳು (Darshan Fans) ಅಶ್ಲೀಲವಾಗಿ ಮೆಸೇಜ್, ಕಾಮೆಂಟ್ಸ್ಗಳನ್ನು ಹಾಕುತ್ತಿರುವ ಕುರಿತು ರಮ್ಯಾ ದೂರು ನೀಡುವುದಾಗಿ ಹೇಳಿದ ಬೆನ್ನಲ್ಲೇ ಪತಿ ಪರವಾಗಿ ವಿಜಯಲಕ್ಷ್ಮಿ (Vijayalakshmi Darshan) ಕಾನೂನು ಹೋರಾಟಕ್ಕೆ ಇಳಿದಿದ್ದಾರೆ
ಕೋರ್ಟ್ ಅಲ್ಲಿ ಇನ್ನೂ ಪ್ರಕರಣ ಇತ್ಯರ್ಥ ಆಗಿಲ್ಲ. ಆಗಲೇ ದರ್ಶನ್ ಅನ್ನು ದೋಷಿ ಎಂದು ಹೇಳುತ್ತಿದ್ದಾರೆ. ಕೋರ್ಟ್ ಅಲ್ಲಿ ಇರುವ ಪ್ರಕರಣಕ್ಕೆ ರಮ್ಯಾ ಕಾಮೆಂಟ್ ಮಾಡಿದ್ದು ಸರಿಯಲ್ಲ. ರಮ್ಯಾ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರಮ್ಯಾ ವಿರುದ್ಧ `ಡಿ’ ಫ್ಯಾನ್ಸ್ನಿಂದ ಕೆಟ್ಟ ಕಾಮೆಂಟ್ಸ್; ಕಾನೂನು ಹೋರಾಟಕ್ಕೆ ಮುಂದಾದ ಮೋಹಕ ತಾರೆ
ಇನ್ಸ್ಟಾಗ್ರಾಂನಲ್ಲಿ ರಮ್ಯಾ ದರ್ಶನ್ ವಿರುದ್ಧ ಪೋಸ್ಟ್ ಹಾಕಿ ರೇಣುಕಾಸ್ವಾಮಿಗೆ ನ್ಯಾಯ ಸಿಗಲಿದೆ ಎಂದು ಬರೆದುಕೊಂಡಿದ್ದರು. ಈ ಹಿನ್ನೆಲೆ ಇಂದು ಮಧ್ಯಾಹ್ನದ ವೇಳೆಗೆ ವಿಜಯಲಕ್ಷ್ಮಿ ನಟಿ ರಮ್ಯಾ ವಿರುದ್ಧ ದೂರು ನೀಡಲಿದ್ದಾರೆ.

ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಕೆಂಡಕಾರಿದ್ದಾರೆ. ದರ್ಶನ್ ಫ್ಯಾನ್ಸ್ ಸೋಗಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್ಗಳನ್ನು ರಮ್ಯಾ ಬಹಿರಂಗೊಳಿಸಿದ್ದಾರೆ. ರೇಣುಕಾಸ್ವಾಮಿ ಕಳುಹಿಸಿದ ಸಂದೇಶಕ್ಕೂ, ಡಿಬಾಸ್ ಫ್ಯಾನ್ಸ್ ಕಳುಹಿಸುತ್ತಿರುವ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀ-ದ್ವೇಷಿ ಮನೋಭಾವದವರು. ಇಂತವರಿಂದಲೇ ಹೆಣ್ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಅಂತ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ರಮ್ಯಾ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ, ಪಬ್ಲಿಕ್ ಟಿವಿ ಜೊತೆ ಮಾತಾಡಿ, ದರ್ಶನ್ ಫ್ಯಾನ್ಸ್ ವಿರುದ್ಧ ದೂರು ಕೊಡುತ್ತೇನೆ ಎಂದಿದ್ದಾರೆ.